(ಪ್ರಾತಿನಿಧಿಕ ಚಿತ್ರ)
ಸಂಡೂರು : ತಾಲ್ಲೂಕಿನ ಯಶವಂತನಗರ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಈಚೆಗೆ ಹೂತಿಟ್ಟಿದ್ದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ತಿಪ್ಪೇಸ್ವಾಮಿ (28) ಎಂಬವರು ಕಳೆದ ಗುರುವಾರ ಮೃತಪಟ್ಟಿದ್ದರು. ಅವರ ತಾಯಿ ಸುಧಾ ಅವರು ‘ನನ್ನ ಮಗನನ್ನು ಯಾರೋ ವಿಷ ಹಾಕಿ ಕೊಂದಿದ್ದಾರೆ’ ಎಂದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಳೆದ ಶನಿವಾರ ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೀಗಾಗಿ ಸಂಡೂರಿನ ತಹಶೀಲ್ದಾರ್ ಜಿ. ಅನಿಲ್ ಕುಮಾರ್, ಸಂಡೂರು ಪೊಲೀಸ್ ಠಾಣೆಯ ಪಿಎಸ್‍ಐ ವಿರೇಶ್, ಬಳ್ಳಾರಿ ವಿಮ್ಸ್‌ನ ವೈದ್ಯ ಡಾ.ರವಿಶಂಕರ್ ಅವರ ನೇತೃತ್ವದಲ್ಲಿ ಮಂಗಳವಾರ ವ್ಯಕ್ತಿಯ ಮೃತ ದೇಹವನ್ನು ಹೊರ ತೆಗೆದು ರುದ್ರಭೂಮಿಯಲಲ್ಏ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಶವವನ್ನು ಹೂತಿಡಲಾಗಿದೆ.
‘ದೇಹದ ಕೆಲ ಭಾಗಗಳನ್ನು ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳಿಸಲಾಗಿದ್ದು, ವರದಿ ಬಂದ ತಕ್ಷಣ ಸತ್ಯಾಂಶ ಹೊರ ಬರಲಿದೆ’ ಎಂದು ಸಂಡೂರಿನ ತಹಶೀಲ್ದಾರ್ ಜಿ.ಅನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.