ಸಂಡೂರು: ತಾಲ್ಲೂಕಿನ ವಡ್ಡು ಗ್ರಾಮದ ಪರಿಶಿಷ್ಟರ ಕಾಲೊನಿಯ ಸಾರ್ವಜನಿಕ ನಳಗಳಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಗ್ರಾಮದಲ್ಲಿನ 1 ಲಕ್ಷ ಲೀ. ನೀರಿನ ಸಾಮಾರ್ಥ್ಯದ ಮೇಲ್ಮಟ್ಟದ ಟ್ಯಾಂಕರ್ ಮೂಲಕ ಕಾಲೊನಿಯ ಜನರಿಗೆ ಹಲವು ದಿನಗಳಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ನೀರು ಕಲುಷಿತವಾಗಿದ್ದು, ಜನರಲ್ಲಿ ನೆಗಡಿ, ಜ್ವರ, ಕೆಮ್ಮು, ಮೈ ಕೈ ನೋವು ಕಾಣಿಸಿಕೊಳ್ಳುತ್ತಿವೆ ಎಂದು ಕಾಲೊನಿಯ ಜನರು ಆರೋಪಿಸಿದ್ದಾರೆ.
ಕಾಲೊನಿಗೆ ನೀರು ಪೂರೈಕೆ ಮಾಡುವ ಮೇಲ್ಮಟ್ಟದ ಟ್ಯಾಂಕರ್‌ನ್ನು ಗ್ರಾಮ ಪಂಚಾಯಿತಿಯವರು ಸುಮಾರು ಆರು ತಿಂಗಳಾದರೂ ಸ್ವಚ್ಛಗೊಳಿಸದೇ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಪಂಚಾಯಿತಿಯವರು ಟ್ಯಾಂಕರ್‌ನ್ನು ಸಕಾಲಕ್ಕೆ ಸ್ವಚ್ಛಗೊಳಿಸಲು ವಿಫಲರಾಗಿದ್ದಾರೆ. ಅಧಿಕಾರಿ, ಜನಪ್ರತಿನಿಧಿಗಳ ಕರ್ತವ್ಯ ನಿರ್ಲಕ್ಷ್ಯದಿಂದ ಕಾಲೊನಿಗೆ ಕಲುಷಿತ ನೀರು ನಿರಂತರವಾಗಿ ಪೂರೈಕೆಯಾಗುತ್ತಿವೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿನ ನೀರಿನ ಎಲ್ಲ ಟ್ಯಾಂಕರ್‌ಗಳನ್ನು ಗ್ರಾಮ ಪಂಚಾಯಿತಿಯವರು ಈ ಕೂಡಲೇ ಸ್ವಚ್ಛಗೊಳಿಸಬೇಕು. ಕಲುಷಿತ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿ ಶುದ್ಧ ಕುಡಿಯುವ ನೀರನ್ನು ಗ್ರಾಮದ ಜನರಿಗೆ ಪೂರೈಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ವರ್ಷಗಳಿಂದ ಗ್ರಾಮದಲ್ಲಿ ವಾರ್ಡ್ ಸಭೆ ನಡೆಸಿಲ್ಲ ಜನರ ಸಮಸ್ಯೆಗಳನ್ನು ನಿವಾರಿಸುತ್ತಿಲ್ಲ. ಕಲುಷಿತ ನೀರಿನ ಪೂರೈಕೆಯಿಂದ ಜನರಿಗೆ ಸಾಂಕ್ರಮಿಕ ರೋಗಗಳು ಹರಡಿದರೆ ಅದಕ್ಕೆ ಗ್ರಾಮ ಪಂಚಾಯಿತಿ ಆರೋಗ್ಯ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಹಳ್ಳದರಾಯಪ್ಪ ವಡ್ಡು ಗ್ರಾಮದ ಪರಿಶಿಷ್ಟ ಕಾಲೊನಿ ನಿವಾಸಿ
ವಡ್ಡು ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ಕಲುಷಿತ ನೀರು ಪೂರೈಕೆಯಾಗುವುದು ಗಮನಕ್ಕಿದ್ದು ಶೀಘ್ರವಾಗಿ ಟ್ಯಾಂಕರ್‌ನ್ನು ಸ್ವಚ್ಛಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದುಜುಬೇರ್ ವಡ್ಡು ಗ್ರಾಮ ಪಂಚಾಯಿತಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.