ಬಳ್ಳಾರಿ ಹೊರವಲಯದ ಸಂಗನಕಲ್ಲಿನ ನವಶಿಲಾಯುಗದ ನೆಲೆಯು ಸುಮಾರು ಒಂದು ಸಾವಿರ ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಇಲ್ಲಿ ಆದಿಮಾನವರು ಜೀವಿಸಿದ್ದ, ಆಯುಧಗಳನ್ನು ತಯಾರಿಸಿದ್ದ ಕುರುಹುಗಳಿವೆ. ಆದರೆ, ಸಂಗನಕಲ್ಲಿನ ಆದಿಮಾನವರ ನೆಲೆಗಳು ಕಲ್ಲು ಗಣಿಗಾರಿಕೆಯ ಹೊಡೆತಕ್ಕೆ ಸಿಲುಕಿ ಸಾಕಷ್ಟು ಹಾನಿಗೀಡಾಗಿದ್ದು, ಈಗ ಎರಡು ಗುಡ್ಡಗಳು ಮಾತ್ರ ಉಳಿದುಕೊಂಡಿವೆ. ಅಲ್ಲಿ ಸಿಕ್ಕ ಕುರುಹುಗಳು ಬಳ್ಳಾರಿಯ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ‘ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯ’ದಲ್ಲಿ ಸದ್ಯ ಜೋಪಾನವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.