ADVERTISEMENT

ಬಳ್ಳಾರಿ | ಗಾಂಜಾ ಮಾರಾಟ: ಒಡಿಶಾ ಮೂಲದ ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 16:05 IST
Last Updated 10 ಸೆಪ್ಟೆಂಬರ್ 2024, 16:05 IST
ವಶಕ್ಕೆ ಪಡೆದ ಗಾಂಜಾ ಜತೆಗೆ ಕೌಲ್‌ ಬಜಾರ್‌ ಪೊಲೀಸರು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 
ವಶಕ್ಕೆ ಪಡೆದ ಗಾಂಜಾ ಜತೆಗೆ ಕೌಲ್‌ ಬಜಾರ್‌ ಪೊಲೀಸರು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ    

ಬಳ್ಳಾರಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೌಲ್‌ ಬಜಾರ್‌ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. 

ಒಡಿಶಾದ ಉದಯಗಿರಿ ಜಿಲ್ಲೆಯ ಜಿಕಾರಿಯಾ(30), ಜೋಹನ್‌ (34) ಬಂಧಿತರು. ಇವರಿಂದ ₹2ಲಕ್ಷ ಮೌಲ್ಯದ 4.31 ಕೆ.ಜಿ ಗಾಂಜಾ, ಜತೆಗೆ ಅವರ ಬಳಿ ಇದ್ದ ₹850 ನಗದು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಕೌಲ್‌ಬಜಾರ್ ಪೊಲೀಸ್ ಠಾಣೆಯ ಸರಹದ್ದಿನ ನಲ್ಲಚೆರುವು ಪ್ರದೇಶದ ಇಟ್ಟಂಗಿ ಭಟ್ಟಿಯ ಆಂಜಿನೇಯ ಗುಡಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರೂ ಗಾಂಜಾ ಮಾರಾಟ ಮಾಡುತ್ತಿದ್ದರು. ಆಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ADVERTISEMENT

ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ನಗರ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಕೌಲ್‌ಬಜಾರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಶ್ರೀ.ಟಿ.ಸುಭಾಷ ಚಂದ್ರ, ಪಿಎಸ್‌ಐ ಲಾರೆನ್ಸ್, ಎಎಸ್‌ಐ  ಕೆ. ಮಂಜುನಾಥ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಡಾ. ಶೋಭಾರಾಣಿ.ವಿ.ಜೆ ಪ್ರಶಂಸಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.