ADVERTISEMENT

ಹುಬ್ಬಳ್ಳಿ: ನಿವೇಶನಗಳಲ್ಲಿ ತ್ಯಾಜ್ಯ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 5:22 IST
Last Updated 20 ನವೆಂಬರ್ 2025, 5:22 IST
ಲಕ್ಷ್ಮಿ ಬಡಾವಣೆಯ ಖಾಲಿ ನಿವೇಶನದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿರುವುದು
ಲಕ್ಷ್ಮಿ ಬಡಾವಣೆಯ ಖಾಲಿ ನಿವೇಶನದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿರುವುದು   

ಹುಬ್ಬಳ್ಳಿ: ಕೇಶ್ವಾಪೂರದ ಸುಳ್ಳರಸ್ತೆಯ ಸೇಂಟ್ ಮೆರಿಜ್ ಶಾಲೆ ಹತ್ತಿರ ಇರುವ ಲಕ್ಷ್ಮಿ ಬಡಾವಣೆ ಮುಖ್ಯ ರಸ್ತೆ ಬಳಿ ಒಂದೆರೆಡು ಖಾಲಿ ನಿವೇಶನಗಳಲ್ಲಿ ಚೇಂಬರ್ ಮೂಲಕ ತುಂಬಿದ ಗಟಾರಿನ ನೀರು ಹರಿಯುತ್ತಿದೆ.

ಇದರಿಂದ ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆ ತಾಳಲಾರದೇ, ಬಾಗಿಲು ಮುಚ್ಚಿಕೊಂಡೆ ಇರಬೇಕಾದ ಸ್ಥಿತಿ ಇದೆ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

 ಎಂ.ಜೆ.ಬಂಗ್ಲೇವಾಲೆ, ಹಿರಿಯ ಕಲಾವಿದ, ಲಕ್ಷ್ಮಿ ಲೇಔಟ್ ನಿವಾಸಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.