
ಸಿರುಗುಪ್ಪ: ‘ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಜ್ಞಾನದ ದಾಸೋಹ ನೀಡಿದ ಸಿದ್ಧಗಂಗೆಯ ದಿ.ಶಿವಕುಮಾರ ಸ್ವಾಮೀಜಿ, ಇಡೀ ಮನುಜ ಕುಲಕ್ಕೆ ದಾರಿದೀಪವಾಗಿದ್ದಾರೆ’ ಎಂದು ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಮಹಾಂತಶಿವಯೋಗಿಗಳ ಮಠದಲ್ಲಿ ‘ಸಿದ್ದಗಂಗೆಯ ಡಾ.ಶಿವಕುಮಾರ ಮಹಾಸ್ವಾಮೀಜಿಯ’ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಮಾನ್ಯ ಮನುಷ್ಯರಾಗಿ ಜನಿಸಿದ ಸ್ವಾಮೀಜಿ ತಮ್ಮ ಜೀವನಾದರ್ಶಗಳಿಂದ ಗುರು ಭಕ್ತಿ, ನಿತ್ಯ ಕಾಯಕ, ಲಿಂಗನಿಷ್ಠೇಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.
ಹಾಲ್ವಿ ಕರ್ಚಿಗನೂರು ಮಠದ ಪೀಠಾಧ್ಯಕ್ಷರಾದ ಅಭಿನವ ಮಹಾಂತಸ್ವಾಮೀಜಿ ಶ್ರಮದಿಂದ ಸಿದ್ದಗಂಗೆ ಶಿವಕುಮಾರಸ್ವಾಮಿಜೀಗಳ ಪುರಾಣ ರಚನೆಗೊಂಡಿದ್ದು ಪ್ರಾಯೋಗಿಕವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶ್ರೀಮಠದಲ್ಲಿ ಪುರಾಣ ಆಯೋಜಿಸಿರುವುದು ಐತಿಹಾಸಿಕವಾಗಿದೆ ಎಂದು ಸ್ಮರಿಸಿದರು.
ಹಾಲ್ವಿ ಕರ್ಚಿಗನೂರು ಮಠದ ಪೀಠಾಧ್ಯಕ್ಷ ಅಭಿನವ ಮಹಾಂತಸ್ವಾಮೀಜಿ, ಸಿರುಗುಪ್ಪ ಗುರುಬಸವಮಠಾಧ್ಯಕ್ಷ ಬಸವಭೂಷಣಸ್ವಾಮೀಜಿ, ಮಹಾಂತ ದೇವರು, ಸದಾಶಿವಸ್ವಾಮೀಜಿ, ಬಸವಬಳಗದ ಬಸವರಾಜಪ್ಪಶರಣ, ಪುರಾಣ ಪ್ರವಚನಕಾರ ತಿಮ್ಮಲಾಪುರ ಕಲ್ಯಾಣಾಶ್ರಮದ ಮಹಾಂತಸ್ವಾಮೀಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.