ADVERTISEMENT

ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ: ಮತ್ತೆ ಮೌನಕ್ಕೆ ಜಾರಿದ ಹಂಪಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 15:53 IST
Last Updated 15 ಆಗಸ್ಟ್ 2021, 15:53 IST
ಹಂಪಿ ಪೋಲಿಸ್ ಠಾಣೆಯ ಸಿಪಿಐ ದೊಡ್ಡಣ್ಣ ಹಾಗೂ ಅವರ ಸಿಬ್ಬಂದಿ ಕಮಲಾಪುರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಬಂದೋಬಸ್ತ್ ಮಾಡಿದ್ದರು. ವಾರಾಂತ್ಯಕ್ಕೆ ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ  ಹೇರಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಹಂಪಿ ಪೋಲಿಸ್ ಠಾಣೆಯ ಸಿಪಿಐ ದೊಡ್ಡಣ್ಣ ಹಾಗೂ ಅವರ ಸಿಬ್ಬಂದಿ ಕಮಲಾಪುರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಬಂದೋಬಸ್ತ್ ಮಾಡಿದ್ದರು. ವಾರಾಂತ್ಯಕ್ಕೆ ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ  ಹೇರಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಮತ್ತೆ ಮೌನಕ್ಕೆ ಜಾರಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತವು ಶನಿವಾರ, ಭಾನುವಾರ ಹಂಪಿಯ ಎಲ್ಲ ಸ್ಮಾರಕಗಳ ವೀಕ್ಷಣೆಯನ್ನು ನಿರ್ಬಂಧಿಸಿದೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಹಂಪಿಯಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ಪ್ರವಾಸಿಗರು ಹಂಪಿಗೆ ಬರದಂತೆ ತಡೆಯಲು ಕಮಲಾಪುರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಬಂದೋಬಸ್ತ್‌ ಮಾಡಲಾಗಿದೆ. ಸ್ವತಃ ಹಂಪಿ ಠಾಣೆ ಸಿಪಿಐ ದೊಡ್ಡಣ್ಣ ಅವರು ಭಾನುವಾರ ಸ್ಥಳದಲ್ಲಿದ್ದರು. ಇನ್ನು, ಕಡ್ಡಿರಾಂಪುರ ಬಳಿಯೂ ಪ್ರವಾಸಿಗರು ಬರದಂತೆ ತಡೆಯಲಾಗುತ್ತಿದೆ.

ADVERTISEMENT

ವಾರಾಂತ್ಯಕ್ಕೆ ರಜೆ ಇರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಬಂದಿದ್ದರು. ಆದರೆ, ನಿರ್ಬಂಧ ಹೇರಿರುವ ವಿಷಯ ತಿಳಿದು, ವಾಪಸಾದರು. ಕೆಲವರು ಏನಾದರಾಗಲಿ ಒಂದು ಸಲ ಪ್ರಯತ್ನಿಸೋಣ ಎಂದು ಹಂಪಿ ಸಮೀಪ ಹೋಗಿ ಹಿಂತಿರುಗಿದರು.

ಪ್ರವಾಸಿಗರೇ ಇಲ್ಲದ ಕಾರಣ ರಥಬೀದಿ ಹಾಗೂ ಪ್ರಮುಖ ಸ್ಮಾರಕಗಳ ಪರಿಸರ ಬಿಕೋ ಎನ್ನುತ್ತಿತ್ತು. ಇಡೀ ಪರಿಸರ ಶಾಂತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.