ADVERTISEMENT

ಅನುಭವದ ಆಳದಿಂದ ಹೊರಹೊಮ್ಮಿದ್ದೇ ಸಾಹಿತ್ಯ: ಕವಿ ಎಚ್. ಎನ್. ಪ್ರಭಾಕರ

7ನೇ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಎಚ್. ಎನ್. ಪ್ರಭಾಕರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 3:02 IST
Last Updated 16 ಫೆಬ್ರುವರಿ 2025, 3:02 IST
<div class="paragraphs"><p>ಸಿರುಗುಪ್ಪ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಎಚ್ ಎನ್ ಪ್ರಭಾಕರ ಕವಿಗೋಷ್ಠಿಯ ಅಧ್ಯಕ್ಷತೆ ಮಾತನಾಡಿದರು</p></div>

ಸಿರುಗುಪ್ಪ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಎಚ್ ಎನ್ ಪ್ರಭಾಕರ ಕವಿಗೋಷ್ಠಿಯ ಅಧ್ಯಕ್ಷತೆ ಮಾತನಾಡಿದರು

   

ಸಿರುಗುಪ್ಪ: 'ಸಾಹಿತ್ಯದಲ್ಲಿ ನೋವು, ನಲಿವು ತುಮುಲಗಳ ಅಳಲು, ದಾಂಪತ್ಯ ಗೀತೆ, ಡಾಂಭಿಕೆ ಭಕ್ತಿ ಯಾವುದೇ ಇರಲಿ ಅನುಭವದ ಆಳದಿಂದ ಹೊರಹೊಮ್ಮಿದಲ್ಲಿ ಸಾಹಿತ್ಯವಾಗಲಿದೆ' ಎಂದು ನಿವೃತ್ತ ಮುಖ್ಯಗುರು ಕವಿ ಎಚ್. ಎನ್. ಪ್ರಭಾಕರ ಅಭಿಪ್ರಾಯಪಟ್ಟರು.

7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಮಾತನಾಡಿದರು.

ADVERTISEMENT

'ಕವಿಗಳು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಬರೆಯಬೇಕು. ಆದರೆ ಈಗ ಯುವಕರು ಮೊಬೈಲ್ ಗೀಳಿಗೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ' ಎಂದು ಅವರು ವಿಷಾದಿಸಿದರು.

ಕವಿ ನಾಮಜಗದೀಶ 'ತನು ಕುಂಭವಾದರೆ' ಕವನ ವಾಚಿಸಿ ಗೋಷ್ಠಿಗೆ ನಾಂದಿ ಹಾಡಿದರು. ಎಚ್. ಬಿ. ಗಂಗಪ್ಪ 'ಮರುಗು'

ಕವನ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.

ಕವಿ ಹೆಚ್. ಎಂ. ಶಿವಪ್ರಕಾಶ 'ಸಮತೆ ಸೂರ್ಯ' ಅಂಬೇಡ್ಕರ್ ಕುರಿತ ಕವನ ಚಪ್ಪಾಳೆ ಗಿಟ್ಟಿಸಿತು. ಕುರುವಳ್ಳಿ ತಿಮ್ಮಯ್ಯ ಅವರ ' ಮೋಕ್ಷದ ಹಾದಿ' ಎನ್ನುವ ಕವನ ಕಿವಿಗೊಟ್ಟು ಕೇಳಿದವರ ಮೆಚ್ಚುಗೆಗೆ ಪಾತ್ರವಾಯಿತು. ಕುಬೇರಪ್ಪ 'ಗಂಡ ಹೆಂಡತಿ ಒಳ ಜಗಳ ಹೆಂಗಿರಬೇಕು' ಹಾಸ್ಯಭರಿತ ಕವನ ವಾಚಿಸಿ ಚಪ್ಪಾಳೆ ಗಿಟ್ಟಿಸಿದರು.

ಎನ್. ನಾಗರಾಜ 'ಹೂವು ಮುಳ್ಳು' ಪದ್ಯ ಓದಿದರು.

ಕೆ. ಗಜೇಂದ್ರ, ಮಾರುತಿ ಬಲಕುಂದಿ, ಕವಿಯತ್ರಿ ಶಾರದಾ ಪತ್ತಾರ್, ಮಲ್ಲಿಕಾರ್ಜುನ, ಮಂಜುನಾಥ ಆರ್. ಪಿ, ರವಿ ಬೀಳಗಿ, ವೀರೇಶ ಕಾಲೇಕಾಯಿ 'ಆಣೆಕಟ್ಟು', ಲಕ್ಷ್ಮಣ ಎನ್. ಎಲ್. 'ಆಗಷ್ಟ್ 14' ಪದ್ಯ ಓದಿದರು.

ಮಂಜಣ್ಣ ಬಡಿಗೇರ ' ದಿನಕರ' ಷಟ್ಟದಿ ಕವನ ವಾಚಿಸಿದರು

ಬಸಮ್ಮ ಹಿರೇಮಠ 'ಜಾಗೃತರಾಗಿರಿ' ಎಂದು ವಾಚಿಸಿ ಹೆಂಗಳೆಯರನ್ನು ಎಚ್ಚರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.