ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಕನ್ನಡ ವಿಷಯದಲ್ಲಿ 13 ಅಂಕ ಪಡೆದಿದ್ದ ತೆಕ್ಕಲಕೋಟೆ ಹೋಬಳಿಯ ಕರೂರು ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ವೀರನಿಖಿತಾಂಜಲಿ, ಮರು ಎಣಿಕೆಯಲ್ಲಿ 73 ಅಂಕ ಪಡೆದಿದ್ದಾಳೆ.
ಕನ್ನಡದಲ್ಲಿ ಕಡಿಮೆ ಅಂಕ ಪಡೆದು, ವೀರನಿಖಿತಾಂಜಲಿ ಅನುತ್ತೀರ್ಣಗೊಂಡಿದ್ದಳು. ಈಗ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣವಾಗಿದ್ದಾಳೆ. ಈ ಫಲಿತಾಂಶದಿಂದ ಶಾಲೆಯ 40ಕ್ಕೆ 40 ವಿದ್ಯಾರ್ಥಿಗಳು ಉತ್ತೀರ್ಣವಾದಂತೆ ಆಗಿದೆ’ ಎಂದು ಶಾಲೆಯ ಪ್ರಾಂಶುಪಾಲ ಖಾಸಿಂ ಸಾಹೇಬ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.