ADVERTISEMENT

ಮರಿಯಮ್ಮನಹಳ್ಳಿ: ‘ಕುಬುಸ’ ಚಲನಚಿತ್ರದ ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2023, 13:27 IST
Last Updated 9 ಮೇ 2023, 13:27 IST
ಮರಿಯಮ್ಮನಹಳ್ಳಿಯಲ್ಲಿ ‘ಕುಬುಸ’ ಚಲನಚಿತ್ರದ ಟೀಸರ್ ಅನ್ನು ಮಂಜಮ್ಮ ಜೋಗತಿ ಸೋಮವಾರ ಬಿಡುಗಡೆ ಮಾಡಿದರು
ಮರಿಯಮ್ಮನಹಳ್ಳಿಯಲ್ಲಿ ‘ಕುಬುಸ’ ಚಲನಚಿತ್ರದ ಟೀಸರ್ ಅನ್ನು ಮಂಜಮ್ಮ ಜೋಗತಿ ಸೋಮವಾರ ಬಿಡುಗಡೆ ಮಾಡಿದರು   

ಮರಿಯಮ್ಮನಹಳ್ಳಿ: ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ‘ಕುಬುಸ’ ಚಲನಚಿತ್ರದ ಟೀಸರ್ ಅನ್ನು ಸೋಮವಾರ ಸಂಜೆ ಮಂಜಮ್ಮ ಜೋಗತಿ ಬಿಡುಗಡೆ ಮಾಡಿದರು.

ನಿರ್ದೇಶಕ ರಘುರಾಮ್ ಚರಣ್ ಮಾತನಾಡಿ, ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ಕತೆಯನ್ನು ಸಿನಿಮಾ ಮಾಡಿದ್ದು, ಇದು ಗ್ರಾಮೀಣ ಸೊಗಡಿನ ಕುಬುಸ ತೊಡದ ಮಹಿಳೆಯ ನೈಜ ಕತೆಯನ್ನು ಹೊಂದಿದೆ. ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ವಿ.ಶೋಭಾ ಅವರ ನಿರ್ಮಾಣದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಶೀಘ್ರದಲ್ಲಿ ತೆರೆಗೆ ಬರಲಿದೆ ಎಂದರು.

ಮಂಜಮ್ಮ ಜೋಗತಿ ಮಾತನಾಡಿ, ಬಹುತೇಕ ಅವಳಿ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಹೆಚ್ಚು ಸ್ಥಳೀಯ ಕಲಾವಿದರೇ ಅಭಿನಯಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿ ಸ್ಥಳೀಯ ಕಲಾವಿದೆ ಹನುಮಕ್ಕ ಸಂಗವ್ವನ ಪಾತ್ರದಲ್ಲಿ ನಟಿಸಿದ್ದು, ಅವರ ಗೆಳೆತಿಯ ಪಾತ್ರದಲ್ಲಿ ನಾನು ನಟಿಸಿದ್ದೇನೆ ಎಂದು ತಿಳಿಸಿದರು.

ADVERTISEMENT

ಚಿತ್ರದ ನಾಯಕ ನಟರಾಜ್ ಭಟ್, ಗುಂಡಿ ರಮೇಶ್, ಭಾರತಿ, ರಾಜು ಕುಲಕರ್ಣಿ, ಶಿವಾನಂದ ಕೆಂಬಾವಿಮಠ, ಬದರೀನಾಥ, ರಾಜಗೋಪಾಲ್. ಅಮೃತ, ಯಶೋದಮ್ಮ, ಗೀತಾ ಸುರೇಶ್, ರಾಮವ್ವ ಜೋಗತಿ, ಅಂಜಿನಮ್ಮ ಜೋಗತಿ, ಭಾಗ್ಯಮ್ಮ ಜೋಗತಿ, ಗೌರಿ ಜೋಗತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.