
ತೆಕ್ಕಲಕೋಟೆ: ಸಮೀಪದ ಮುಕ್ಕುಂದೆ ಗ್ರಾಮದ ತುಂಗಭದ್ರಾ ನದಿಯ ನಡುಗಡ್ಡೆಯ ಗಡ್ಡೆ ಖಾದರ್ ಬಾಷ ಖಾದ್ರಿ ಅವರ 395ನೇ ವರ್ಷದ ಉರುಸ್ ಸಂದರ್ಭದಲ್ಲಿ ಗುರುವಾರ ನೂಕುನುಗ್ಗಲು ಉಂಟಾಗಿ ತೆಪ್ಪದಲ್ಲಿ ನೀರು ತುಂಬಿ ಮುಗುಚಿದೆ.
ಸಾವಿರಾರು ಪ್ರಮಾಣದಲ್ಲಿ ಭಕ್ತರು ಬಂದಿದ್ದರಿಂದ ಕೇವಲ ಆರು ತೆಪ್ಪ ಇದ್ದು, ತೆಪ್ಪ ಇಳಿಯಲು ನೂಕುನುಗ್ಗಲು ಉಂಟಾಗಿದೆ. ಒಂದು ತೆಪ್ಪದಲ್ಲಿ 20 ಕ್ಕಿಂತಲೂ ಹೆಚ್ಚು ಜನ ಕುಳಿತಿದ್ದರು, ಅದೃಷ್ಟವಶಾತ್ ದಡದಲ್ಲಿ ಈ ಘಟನೆ ಜರುಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ. ಇದೇ ರೀತಿ ನಾಲ್ಕು ತೆಪ್ಪಗಳು ಮುಗುಚಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ, ಆಂಧ್ರದಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸಿರುಗುಪ್ಪ, ಕಂಪ್ಲಿ, ತೆಕ್ಕಲಕೋಟೆ ಮಾರ್ಗವಾಗಿ ಉರುಸ್‌ಗೆ ತೆರಳುವವರಿಗೆ ಹೆರಕಲ್ಲು ಗ್ರಾಮದ ಬಳಿ ಇರುವ ಹರಿಗೋಲು ಘಾಟ್ ಮಾತ್ರ ಏಕೈಕ ಮಾರ್ಗವಾಗಿದ್ದು, ಹರಿಗೋಲು (ತೆಪ್ಪ) ಮೂಲಕವೇ ಸಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.