ADVERTISEMENT

ವಾಜಪೇಯಿ ಉದ್ಯಾನಕ್ಕೆ ಬಂದ ಬಿಳಿ ಹುಲಿ, ತೋಳ

ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ‘ಅರ್ಜುನ್‌’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಆಗಸ್ಟ್ 2020, 21:47 IST
Last Updated 26 ಆಗಸ್ಟ್ 2020, 21:47 IST
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದಿರುವ ಬಿಳಿ ಹುಲಿ
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದಿರುವ ಬಿಳಿ ಹುಲಿ   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್‌ ಸಂರಕ್ಷಿತಾರಣ್ಯದ ಮಡಿಲಲ್ಲಿ ಇರುವ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಿಳಿ ಹುಲಿ, ತೋಳ ತರಲಾಗಿದೆ.

ಮೈಸೂರು ಮೃಗಾಲಯದಿಂದ ವಾರದ ಹಿಂದೆ ಈ ಅತಿಥಿಗಳನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ. ಬಿಳಿ ಹುಲಿಯ ಹೆಸರು ಅರ್ಜುನ್‌. ಕಪ್ಪುಪಟ್ಟಿ ಹೊಂದಿರುವ ಈ ಬಿಳಿಹುಲಿಗೆ ಈಗ 7 ವರ್ಷ. ಒಟ್ಟು ಏಳು ತೋಳಗಳನ್ನು ತರಲಾಗಿದೆ.‘ರಾಜ್ಯದಲ್ಲಿ ಮೈಸೂರು ಮೃಗಾಲಯ ಬಿಟ್ಟರೆ ಬೇರೆಲ್ಲೂ ಬಿಳಿಹುಲಿ ಇಲ್ಲ. ಇವುಗಳ ಜೊತೆ ತೋಳಗಳು ಬಂದಿರುವುದರಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್‌. ಕಿರಣ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT