ADVERTISEMENT

ಕಂಪ್ಲಿ: ಕಳವು ಮಾಡಿದ ಮೊಬೈಲ್‍ನಿಂದ ₹1.20ಲಕ್ಷ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 4:22 IST
Last Updated 20 ಡಿಸೆಂಬರ್ 2025, 4:22 IST
<div class="paragraphs"><p>ವಂಚನೆ</p></div>

ವಂಚನೆ

   

ಕಂಪ್ಲಿ: ಇಲ್ಲಿನ ಹಳೆ ಬಸ್‍ನಿಲ್ದಾಣದಲ್ಲಿ ಸ್ಥಳೀಯ ನಿವಾಸಿಗಳಾದ ತೇರಿನಮನೆ ಹೋಟೆಲ್ ಬಸವರಾಜ ಮತ್ತು ಬಿ.ಎಂ. ಕೇದಾರನಾಥ  ಅವರು ಡಿ.17ರಂದು ಬಳ್ಳಾರಿ ಬಸ್ ಏರುವಾಗ ಕಳವಾಗಿದ್ದ ಅವರ ಮೊಬೈಲ್‍ನಿಂದ ₹1.20ಲಕ್ಷ ವರ್ಗಾವಣೆಯಾಗಿದೆ.

ಮೊಬೈಲ್ ಕಳವು ಮಾಡಿದವರು ಬಸವರಾಜ ಅವರ ಖಾತೆಯ ಹಣವನ್ನು ಡಿ.17ರಂದು ಮೊಬೈಲ್ ಮೂಲಕವೇ ₹ 5,000 ಅನ್ನು ವಿ. ರಾಮಸ್ವಾಮಿಗೆ, ಡಿ.18ರ ಮಧ್ಯರಾತ್ರಿ 12ಕ್ಕೆ ₹ 10,000 ಅನ್ನು ಕೇದಾರನಾಥಗೆ, ₹50,000 ಜೆ ಅಂಡ್ ಕೆ ವಾಶೀಮ್ ಅಹಮದ್‍ಗೆ, ₹ 40,000 ಜೆ ಅಂಡ್ ಕೆ ಫಾರೂಕ್ ಅಹಮದ್ ಎಂಬುವವರಿಗೆ ವರ್ಗಾಯಿಸಿದ್ದಾರೆ.
ಅದೇ ರೀತಿ ಬಿ.ಎಂ. ಕೇದಾರನಾಥ ಅವರ ಖಾತೆಯಿಂದ ಡಿ.18ರಂದು ₹ 1,000, ₹ 14,000 ಕ್ರಮವಾಗಿ ಆಂಧ್ರಪ್ರದೇಶದ ಮೈಲೂರಿನ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದಾರೆ.

ADVERTISEMENT

ಮೊಬೈಲ್ ಕಳವು ಬಳಿಕ ಇಬ್ಬರು ಹೊಸ ಮೊಬೈಲ್, ಸಿಮ್ ಖರೀದಿಸಿದಾಗ ಹಣ ವರ್ಗಾವಣೆಯಾಗಿರುವುದು ಖಚಿತಪಟ್ಟಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸಂಬಂಧಿಸಿದ ದಾಖಲೆ, ಇತರೆ ಮಾಹಿತಿ ಒದಗಿಸಿರುವುದಾಗಿ ಬಸವರಾಜ ಮತ್ತು ಬಿ.ಎಂ. ಕೇದಾರನಾಥ ಶುಕ್ರವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.