ವಂಚನೆ
ಬಳ್ಳಾರಿ: ತಿರುಪತಿಯಲ್ಲಿ ಕೊಠಡಿ ಕಾಯ್ದಿರಿಸಲು ಆನ್‌ಲೈನ್‌ನಲ್ಲಿ ಪ್ರಯತ್ನಿಸಿದ ವೃದ್ಧ ದಂಪತಿ, ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ₹20 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ತಿರುಪತಿಯಲ್ಲಿ ಉಳಿದುಕೊಳ್ಳಲು ಜೂನ್ 25ರಂದು ಇಂಟರ್‌ನೆಟ್‌ನಲ್ಲಿ ಲಾಡ್ಜ್‌ಗಾಗಿ ಜಾಲಾಡಿದ್ದ ದಂಪತಿ, ಅಲ್ಲಿ ಸಿಕ್ಕ ನಂಬರ್‌ವೊಂದಕ್ಕೆ ಕರೆ ಮಾಡಿ ಕೊಠಡಿ ಬಗ್ಗೆ ವಿಚಾರಿಸಿದ್ದರು. ಅವರು ಹೇಳಿದಂತೆ ಮೊದಲಿಗೆ ₹1,100 ಅನ್ನು ಫೋನ್ ಪೇ ಮೂಲಕ ಪಾವತಿಸಿದ್ದರು. ಮರುದಿನ ಮತ್ತೆ ಕರೆ ಮಾಡಿದ್ದ ವಂಚಕರು ಜಿಎಸ್‌ಟಿ ಹಣವಾಗಿ ₹1,160 ಹಾಕಿಸಿಕೊಂಡಿದ್ದರು ಎನ್ನಲಾಗಿದೆ.
‘ದಂಪತಿ ಹಣ ವಾಪಸ್ ಕೇಳಿದ್ದಾರೆ. ಹಣ ಹಿಂದಿರುಗಿಸಬೇಕಿದ್ದರೆ ಒಂದಷ್ಟು ಹಣ ಹಾಕಲು ವಂಚಕರು ಹೇಳಿದ್ದಾರೆ. ಹೀಗೆ 16 ದಿನಗಳಲ್ಲಿ ಹಂತ ಹಂತವಾಗಿ ಒಟ್ಟು ₹20,69,196 ಹಣವನ್ನು ದಂಪತಿ ವಂಚಕರಿಗೆ ಕಳುಹಿಸಿದ್ದಾರೆ. ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.