ADVERTISEMENT

‘ಹೊಸಪೇಟೆ ಮಾರ್ಗವಾಗಿ ಅಯೋಧ್ಯೆಗೆ ರೈಲು ಓಡಿಸಿ’

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 7:31 IST
Last Updated 31 ಆಗಸ್ಟ್ 2020, 7:31 IST

ಹೊಸಪೇಟೆ: ‘ಉದ್ದೇಶಿತ ಬೆಳಗಾವಿ–ಹುಬ್ಬಳ್ಳಿ–ಅಯೋಧ್ಯೆ ರೈಲನ್ನು ನಗರದ ಮೂಲಕ ಓಡಿಸಬೇಕು’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ವೈ. ಯಮುನೇಶ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ರಾಮನ ಜನ್ಮಸ್ಥಳ ಅಯೋಧ್ಯೆಗೆ ರೈಲು ಓಡಿಸಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ. ರಾಮಾಯಣದಲ್ಲಿ ಉಲ್ಲೇಖಿಸಿರುವ ಕಿಷ್ಕಿಂದೆ, ಹಂಪಿ, ಅಂಜನಾದ್ರಿ ನಗರಕ್ಕೆ ಹೊಂದಿಕೊಂಡಿವೆ. ವರ್ಷಕ್ಕೊಮ್ಮೆ ಓಡುವ ‘ಶ್ರೀರಾಮಾಯಣ ದರ್ಶನಂ’ ರೈಲು ಸಹ ಪ್ರವಾಸಿಗರನ್ನು ಹಂಪಿಗೆ ಕರೆದುಕೊಂಡು ಬರುತ್ತದೆ. ಇಷ್ಟೆಲ್ಲ ಐತಿಹಾಸಿಕ ಹಿನ್ನೆಲೆ ನಗರಕ್ಕೆ ಇದೆ. ಹಾಗಾಗಿ ಆ ರೈಲು ನಗರದ ಮೂಲಕ ಸಂಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.