ಕೊಟ್ಟೂರು : ಪಟ್ಟಣದಲ್ಲಿ ಕಳೆದ ವಾರದಿಂದ ಜೆಸ್ಕಾಂ ಇಲಾಖೆಯವರು ಜಂಗಲ್ ಕಟಿಂಗ್ ನೆಪದಲ್ಲಿ ರಸ್ತೆ ಬದಿಯಲ್ಲಿ ಸಮೃದ್ಧಿಯಾಗಿ ಬೆಳೆದ ಮರಗಳನ್ನು ಕತ್ತರಿಸುತ್ತಿರುವುದಕ್ಕೆ ವಿಟಿಎಸ್ ಫೌಂಡೇಷನ್ ಮುಖ್ಯಸ್ಥ ಹಾಗೂ ಪರಿಸರ ಪ್ರೇಮಿ ವಿ.ಟಿ.ತಿಪ್ಪೇಸ್ವಾಮಿ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಸ್ಕಾಂ ಇಲಾಖೆ ಖಾಸಗಿಯವರಿಗೆ ಜಂಗಲ್ ಕಟಿಂಗ್ ಕೆಲಸವನ್ನು ಗುತ್ತಿಗೆ ನೀಡಿ ಕೈತೊಳೆದುಕೊಂಡಿದೆ. ವಿನಃ ಯಾವ ರೀತಿ ವಿದ್ಯುತ್ ತಂತಿಗಳಿಗೆ ತಗುಲಿದ ರಂಬೆ ಕೊಂಬೆಗಳನ್ನು ಕತ್ತರಿಸಬೇಕು ಎಂಬ ಮುನ್ಸೂಚನೆ ನೀಡದ ಪ್ರಯುಕ್ತ ಗುತ್ತಿಗೆ ಕೆಲಸಗಾರರು ಬೇಕಾಬಿಟ್ಟಿ ಮರಗಳನ್ನು ಕತ್ತರಿಸಿದರೆ ವಿನಃ ಗಿಡ ಮರಗಳ ಅಳಿವು ನೋಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿಡಮರ ಬೆಳೆಸಿ ಪರಿಸರ ಉಳಿಸಿ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗಿದ್ದು ಪರಿಸರ ದಿನಾಚರಣೆ ನಡೆಯುವ ಸಂದರ್ಭದಲ್ಲಿ ಮರಗಳನ್ನು ಉಳಿಸುವ ಬದಲು ಮರಗಳ ಮಾರಣ ಹೋಮ ಕಂಡು ಪಟ್ಟಣದ ಜನತೆ ಹಾಗೂ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಂಗಲ್ ಕಟಿಂಗ್ ನೆಪದಲ್ಲಿ ಅಸಮರ್ಪಕವಾಗಿ ಮರಗಳನ್ನು ಕತ್ತರಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದು ಗಿಡ ಮರಗಳನ್ನು ಕತ್ತರಿಸುವಾಗ ಅರಣ್ಯ ಇಲಾಖಾಧಿಕಾರಿಗಳ ಸಹಕಾರ ಪಡೆದರೆ ಹೆಚ್ಚಿನ ಮಟ್ಟದಲ್ಲಿ ಕೊಂಬೆಗಳನ್ನು ಕಟಾವು ಮಾಡದಂತೆ ವೈಜ್ಙಾನಿಕ ಸಲಹೆಗಳನ್ನು ನೀಡುತ್ತಿದ್ದರು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷತನದಿಂದ ರಂಬೆ ಕೊಂಬೆಗಳನ್ನು ಕಳೆದುಕೊಂಡು ಬೋಡು ಮರಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಜೊತೆಯಲ್ಲಿ ಪರಿಸರ ಕಾಪಾಡುವುದಕ್ಕಾಗಿ ಗಿಡ ಮರಗಳನ್ನು ಉಳಿಸುವ ಬೆಳೆಸುವ ನಿಟ್ಟಿನತ್ತ ಕಾರ್ಯೋನ್ಮುಖರಾಗೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.