ಹರಪನಹಳ್ಳಿ : ತಾಲ್ಲೂಕಿನ ಹುಲಿಕಟ್ಟಿ ಗುಳೇದ ಲಕ್ಕಮ್ಮ ದೇವಿ ಜಾತ್ರೆ ಮುಕ್ತಾಯವಾಗಿದ್ದು, ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ನಾಣ್ಯ ದೊರೆತಿದೆ.
ಭಾರತದಲ್ಲಿ ಅದರ ಮೌಲ್ಯ ₹22.26 ಇದೆ. ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಎಣಿಕೆಯಲ್ಲಿ ಒಟ್ಟು ₹6,89,635 ಸಂಗ್ರಹವಾಗಿದೆ. ಮಗಳ ಮದುವೆಯಾಗಬೇಕು, ನೌಕರಿ ಬೇಕು ಹೀಗೆ ಅನೇಕ ಹರಕೆ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. ಕಾಣಿಕೆ ರೂಪದಲ್ಲಿ ಬಂದಿರುವ ಬೆಳ್ಳಿ ಮತ್ತು ಬಂಗಾರದ ಒಡವೆಗಳ ಮೌಲ್ಯ ಲೆಕ್ಕಾಚಾರ ಮಾಡಬೇಕಿದೆ ಎಂದು ದೇವಸ್ಥಾನ ಸಮಿತಿ ಮುಖಂಡರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.