ತೆಕ್ಕಲಕೋಟೆ: ಸಮೀಪದ ಉಪ್ಪಾರ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಡೆಮನೆ ಮುತ್ತಯ್ಯ ಆಯ್ಕೆಯಾಗಿದ್ದಾರೆ.
ಈಗಾಗಲೇ ಉಪಾಧ್ಯಕ್ಷರಾಗಿ ಕುರುವಳ್ಳಿ ಈರಮ್ಮ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ದೇವರಮನೆ ನಾಗಪ್ಪ ಬಸವರಾಜ, ಶೇಕಣ್ಣ.ಕೆ ಕಾಡಸಿದ್ದ, ಬೀರಪ್ಪ ಪಾಲಾಕ್ಷೀಗೌಡ ಜಡಿಸ್ವಾಮಿ ಪರಮೆಶ್ವರ ಹೊಸಳ್ಳಿ ಬಾಲಪ್ಪ ಹನುಮಣ್ಣ, ಮಲ್ಲೇಶಪ್ಪ, ರಾಜಪ್ಪ, ಹನುಮಣ್ಣ, ವೆಂಕಟೇಶ ಮಹಿಳಾ ಸದಸ್ಯರಾದ ಹನುಮಂತಮ್ಮ, ಸುಶಿಲಮ್ಮ, ಅನುರಾಧ, ಭಾಗ್ಯಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.