ADVERTISEMENT

ಬಳ್ಳಾರಿ | ಯೂರಿಯಾ ಅಕ್ರಮ: ಐದು ಅಂಗಡಿಗಳ ಲೈಸನ್ಸ್‌ ರದ್ದು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:58 IST
Last Updated 22 ಆಗಸ್ಟ್ 2025, 4:58 IST
ಸೋಮಸುಂದರ್‌
ಸೋಮಸುಂದರ್‌   

ಬಳ್ಳಾರಿ: ‘ಯೂರಿಯಾ ದಾಸ್ತಾನು ಇದ್ದರೂ ಇಲ್ಲ ಎಂದು ಹೇಳುತ್ತಿದ್ದ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಕಂಪ್ಲಿ ತಾಲೂಕಿನ ಐದು ರಸಗೊಬ್ಬರ ಮತ್ತು ಪರಿಕರ ಮಾರಾಟ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ತಿಳಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿರುವ ಅವರು, ‘ಕುರುಗೋಡು ತಾಲೂಕಿನಲ್ಲಿ 54 ಚೀಲ ಯೂರಿಯಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೈತ  ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಹವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.  

‘ಕಲಬುರಗಿಯ ‘ಭೀಮಾ ಕೃಷ್ಣಾ ರಾಸಾಯನಿಕ ಮತ್ತು ರಸಗೊಬ್ಬರ ಕಂಪನಿ’ಯಲ್ಲಿ ತಯಾರಾದ ಯೂರಿಯಾವನ್ನು ಕುರುಗೋಡಿಗೆ ಅಕ್ರಮವಾಗಿ ತಂದು, ವಾಹನದಲ್ಲಿಟ್ಟುಕೊಂಡು ಮಹಿಳೆ ಮಾರಾಟ ಮಾಡುತ್ತಿದ್ದರು‘ ಎಂದು ಹೇಳಿದರು. 

ADVERTISEMENT

‘ಯೂರಿಯಾ ಬಿಕ್ಕಟ್ಟು ನಿವಾರಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ನಿರಂತ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಸೋಮಸುಂದರ್‌ ಹೇಳಿದರು. 

ರಸಗೊಬ್ಬರ ಕೊರತೆ ಇಲ್ಲ: ‘ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 44,350 ಮೆಟ್ರಿನ್‌ ಟನ್‌ ಯೂರಿಯಾ ಅಗತ್ಯವಿದೆ. ಇಲ್ಲಿವರೆಗೆ 37,668 ಮೆಟ್ರಿಕ್‌ ಟನ್‌ನಷ್ಟು ಪೂರೈಕೆಯಾಗಿದೆ. 5,114 ಟನ್‌ ದಾಸ್ತಾನು ಇದೆ. ಇನ್ನು ಎರಡು ದಿನಗಳಲ್ಲಿ 1,933 ಟನ್‌ ಬರುತ್ತಿದೆ’ ಎಂದು ಸೋಮಸುಂದರ್  ಮಾಹಿತಿ ನೀಡಿದ್ಧಾರೆ. 

‘ರಸಗೊಬ್ಬರ ನಿರಂತರವಾಗಿ ಪೂರೈಕೆಯಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಭತ್ತದ ಕ್ಷೇತ್ರ ಹೆಚ್ಚಾಗಿರುವುದರಿಂದ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ರೈತರು ಶಿಫಾರಸಿನ ಪ್ರಮಾಣಕ್ಕಿಂತಲೂ ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.