ADVERTISEMENT

ವೀರಶೈವ ತರುಣ ಸಂಘ: ಅಜೀವ ಸದಸ್ಯತ್ವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:26 IST
Last Updated 14 ಫೆಬ್ರುವರಿ 2026, 7:26 IST
ಸಿರುಗುಪ್ಪದ ವೀರಶೈವ ತರುಣ ಸಂಘದ ವತಿಯಿಂದ ಅಜೀವ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ತರುಣ ಸಂಘದ ತಾಲ್ಲೂಕು ಅಧ್ಯಕ್ಷ ಸುಳುವಾಯಿ ಮಲ್ಲಿಕಾರ್ಜುನ ಅವರು ನೋಂದಣಿ ಮಾಡಿಸುವ ಮೂಲಕ ಚಾಲನೆ ನೀಡಿದರು
ಸಿರುಗುಪ್ಪದ ವೀರಶೈವ ತರುಣ ಸಂಘದ ವತಿಯಿಂದ ಅಜೀವ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ತರುಣ ಸಂಘದ ತಾಲ್ಲೂಕು ಅಧ್ಯಕ್ಷ ಸುಳುವಾಯಿ ಮಲ್ಲಿಕಾರ್ಜುನ ಅವರು ನೋಂದಣಿ ಮಾಡಿಸುವ ಮೂಲಕ ಚಾಲನೆ ನೀಡಿದರು   

ಸಿರುಗುಪ್ಪ: ಸಂಘದ ಕಾರ್ಯವೈಖರಿಯನ್ನು ಹೆಚ್ಚಿಸಲು ಸದಸ್ಯತ್ವ ನೋಂದಣಿ ಅಭಿಯಾನವು ಸಹಾಯಕವಾಗುತ್ತದೆ ಎಂದು ವೀರಶೈವ ತರುಣ ಸಂಘದ ತಾಲ್ಲೂಕು ಅಧ್ಯಕ್ಷ ಸುಳುವಾಯಿ ಮಲ್ಲಿಕಾರ್ಜುನ ಹೇಳಿದರು.

ನಗರದ ಆದೋನಿ ರಸ್ತೆಯಲ್ಲಿರುವ ವೀರಶೈವ ತರುಣ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಜೀವ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೊಸ ಸದಸ್ಯರಿಂದ ಬರುವ ಸದಸ್ಯತ್ವ ಶುಲ್ಕದಿಂದ ಸಂಘದ ದೈನಂದಿನ ಚಟುವಟಿಕೆಗಳನ್ನು ನಡೆಸಲು ಹಾಗೂ ಸಮುದಾಯ ಅಭಿವೃದ್ದಿ ಕೆಲಸಗಳನ್ನು ಮಾಡುವ ಉದ್ದೇಶದಿಂದ ನಗರದಲ್ಲಿರುವ ನಮ್ಮ ಸಮುದಾಯದ ಮನೆಗಳಿಗೆ ತೆರಳಿ, ಅಜೀವ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಸದಸ್ಯತ್ವ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.

ADVERTISEMENT

ವೀರಶೈವ ತರುಣ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗನಗೌಡ, ಉಪಾಧ್ಯಕ್ಷರಾದ ಎಚ್.‌ಮಲ್ಲನಗೌಡ, ಎನ್.ಸುರೇಶಗೌಡ, ಸಹ ಕಾರ್ಯದರ್ಶಿ ಚನ್ನ ಮಲ್ಲಿಕಾರ್ಜುನ, ಸಂಘಟನಾ ಕಾರ್ಯದರ್ಶಿ ಸಿ.ಚೇತನ್‌ ಕುಮಾರ್‌, ಖಜಾಂಚಿ ಕೆ.ಎಮ್‌.ವಿರುಪಾಕ್ಷಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.