
ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ಜಿ. ನಾಗಲಾಪುರ ತಾಂಡಾ ಬಳಿಯ ಹೊಲವೊಂದರಲ್ಲಿ ಬೀಡುಬಿಟ್ಟಿದ್ದ ಕುರಿಮರಿಗಳ ಹಿಂಡಿನ ಹಟ್ಟಿಯ ಮೇಲೆ ಬುಧವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದ ಪರಿಣಾಮವಾಗಿ 36 ಕುರಿ ಮರಿಗಳು ಮೃತಪಟ್ಟಿವೆ.
ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗೊಲ್ಲರಹಟ್ಟಿಯ ಗರಗಮಲ್ಲಪ್ಪ ಎಂಬುವರಿಗೆ ಸೇರಿದ ಕುರಿಮರಿಗಳು ಚಿರತೆ ದಾಳಿಗೆ ಮೃತಪಟ್ಟಿದ್ದು, ₹ 3 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ ನಡೆಯುತ್ತಿರುವ ಉಡುಸಲಮ್ಮ ಜಾತ್ರೆಗೆ ಕುರಿಹಿಂಡಿನ ಪುರುಷರು ತೆರಳಿದ್ದರು. ಆದರೆ ಹಿಂಡಿನ ಬಳಿ ಮಹಿಳೆಯರು ಇಬ್ಬರು ಮಾತ್ರ ಇದ್ದುದ್ದರಿಂದ ಚಿರತೆ ದಾಳಿಗೆ ಹೆದರಿ ಜೀವಭಯದಿಂದ ಓಡಿಹೋದರು. ಹೀಗಾಗಿ ಕುರಿಮರಿಗಳನ್ನು ರಕ್ಷಿಸಲಾಗಿಲ್ಲ ಎಂದು ಕುರಿಹಿಂಡಿನ ಮಾಲೀಕ ಗರಗಮಲ್ಲಪ್ಪ ತಿಳಿಸಿದರು.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.