ADVERTISEMENT

ಹಗರಿಬೊಮ್ಮನಹಳ್ಳಿ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಿವೇಕ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:28 IST
Last Updated 11 ಜನವರಿ 2026, 4:28 IST
ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರಂಭಗೊಂಡ ವಿವೇಕ‌ ಸ್ಮರಣೆ ಕಾರ್ಯಕ್ರಮದಲ್ಲಿ ಹಾಲಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು
ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರಂಭಗೊಂಡ ವಿವೇಕ‌ ಸ್ಮರಣೆ ಕಾರ್ಯಕ್ರಮದಲ್ಲಿ ಹಾಲಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು   

ಹಗರಿಬೊಮ್ಮನಹಳ್ಳಿ: ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಜಗತ್ತಿನ ಎಲ್ಲ ಕಡೆಗೂ ಮೆರೆಸಿದರು ಎಂದು ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶನಿವಾರದಿಂದ ಆಯೋಜಿಸಲಾಗಿದ್ದ ವಿವೇಕಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವೇಕಾನಂದರ ಸಾಧನೆಗೆ ಯೋಗ ಸಹಕಾರಿಯಾಗಿದೆ, ಸಾಧನೆಯ ಶಿಖರವನ್ನೇರಲು ಯೋಗ ಮತ್ತು ಧ್ಯಾನ ಅಗತ್ಯವಾಗಿದೆ. ಪ್ರಾಣಯಾಮ, ಮಾನಸಿಕ ಧ್ಯಾನ, ಸ್ವಾಧೀನತೆಯಂಥಹ ಏಕಾಗ್ರತೆಯ ಸಾಧನೆಯನ್ನು ಸ್ವಾಮಿ ವಿವೇಕಾನಂದರು ಮಾಡಿದ್ದರು. ಆ ದಾರಿಯಲ್ಲಿ ಸಾಗಿದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.

ADVERTISEMENT

ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಬಸವನಗೌಡ ಮಾತನಾಡಿ, ಮೂರು ದಿನಗಳು ವಿವೇಕ ಸ್ಮರಣೆ ನಡೆಯಲಿದೆ, ಯೋಗ ಮತ್ತು ಧ್ಯಾನ ಶಿಬಿರ ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ ಎಂದರು.

ಕೇಂದ್ರದ ಸೋಮನಗೌಡ್ರು, ಸಂಸ್ಥೆಯ ಸಹ ಕಾರ್ಯದರ್ಶಿ ಡಿ.ದುರುಗಣ್ಣ, ಪದ್ಮಾ ವಿಠಲ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಪಾಪಣ್ಣ, ಮಂಜುನಾಥ, ಆರ್.ಕೊಟ್ರಪ್ಪ, ವೀರೇಶ್, ವೆಂಕಟೇಶ, ರಂಗನಾಥ, ಎ.ಎಂ.ದಾನಯ್ಯ, ಬಿ.ರಮೇಶ, ಬಿ.ನಟರಾಜ, ಎಸ್.ಸುಭಾಷ್, ಡಾ.ಅಜ್ಜಯ್ಯ, ಡಾ.ವಿಶ್ವನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.