ADVERTISEMENT

ಕಸ ರಸವಾಗಿಸುವ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 14:06 IST
Last Updated 3 ಅಕ್ಟೋಬರ್ 2021, 14:06 IST
ಜಿಲ್ಲಾ ಪಂಚಾಯಿತಿಯ ಮಳಿಗೆಯಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಕುರಿತ ಮಾಹಿತಿ ಪಡೆದ ಸಾರ್ವಜನಿಕರು
ಜಿಲ್ಲಾ ಪಂಚಾಯಿತಿಯ ಮಳಿಗೆಯಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಕುರಿತ ಮಾಹಿತಿ ಪಡೆದ ಸಾರ್ವಜನಿಕರು   

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ತೆರೆದಿದ್ದ ಮಳಿಗೆಗಳಲ್ಲಿ ಜಿಲ್ಲಾ ಪಂಚಾಯಿತಿಯು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆ ಕುರಿತ ಮಾಹಿತಿ ಎಲ್ಲರ ಆಕರ್ಷಿಸಿತು.

ತಾಲ್ಲೂಕಿನ ಮಲಪನಗುಡಿ ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣದ ಸಿಬ್ಬಂದಿಯು ಕಸವನ್ನು ಸಂಪನ್ಮೂಲ ಆಗಿಸುವ ವಿಧಾನಗಳನ್ನು ಜನರಿಗೆ ತಿಳಿ ಹೇಳುತ್ತಿದ್ದರು. ಹಸಿ-ಒಣ ಕಸದ ವಿಧಗಳನ್ನು ತಿಳಿಸಿ, ಅವುಗಳನ್ನು ಬೇರ್ಪಡಿಸಿ, ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ತಿಳಿಸುತ್ತ, ಜನರಲ್ಲಿ ಜಾಗೃತಿ ಮೂಡಿಸಿದರು.

ಉದ್ಯೋಗ ಖಾತ್ರಿ ಯೋಜನೆ, ಜಲ್ ಜೀವನ್ ಮಿಷನ್ ಯೋಜನೆಯ ವಸ್ತು ವಿಷಯಗಳು ಜನರ ಗಮನ ಸೆಳೆದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.