ತೆಕ್ಕಲಕೋಟೆ ಬಳಿಯ ಬಂಗಾರರಾಜು ಕ್ಯಾಂಪ್‌ನ ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು
ತೆಕ್ಕಲಕೋಟೆ: ‘ಪಟ್ಟಣ ವ್ಯಾಪ್ತಿಯ ಬಂಗಾರಾಜು ಕ್ಯಾಂಪ್‌ನಲ್ಲಿ 10 ದಿನಗಳಿಂದ ಕುಡಿಯುವ ನೀರು ಸರಬರಾಜಾಗದೆ ತೊಂದರೆ ಉಂಟಾಗಿದೆ’ ಎಂದಯ ಸ್ಥಳೀಯ ನಿವಾಸಿಗಳು ಆರೋಪಿಸಿದರು.
‘ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾ೦ಪ್‌ನಲ್ಲಿ ಜಲಜೀವನ್ ಮಿಷನ್ ಅಡಿ ಜುಲೈನಲ್ಲಿ ನೀರು ಸರಬರಾಜು ಆರಂಭಿಸಿದ್ದರೂ, ಈ ಯೋಜನೆಗೆ ಗ್ರಾಮ ಪಂಚಾಯಿತಿಯು ಆರ್‌ಆರ್ ಸಂಖ್ಯೆ ಪಡೆಯದ ಕಾರಣ ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಇದರಿಂದಾಗಿ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ನೀರಿನ ಸರಬರಾಜು ವ್ಯವಸ್ಥೆಗೆ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದು, ಇದರಿಂದ ನಮಗೆ ಬೋರ್‌ವೆಲ್ ನೀರೇ ಗತಿಯಾಗಿದೆ. ಅಧಿಕಾರಿಗಳು ಜವಾಬ್ದಾರಿ ಮರೆತು, ಸಾರ್ವಜನಿಕರಿಗೆ ಸಮಸ್ಯೆ ಮಾಡುವುದು ಸರಿಯೇ’ ಎಂದು ಗಾಮಸ್ಥೆ ಅಂಬಮ್ಮ ಪ್ರಶ್ನಿಸಿದರು.
ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಶೀಗ್ರ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸಲಾಗುವುದು ಎಂದೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಡಿ. ದೇವೀರಮ್ಮ, ಟಿ. ಚಂದ್ರಮ್ಮ, ಗೊರವರ ನಾಗಮ್ಮ, ಈರಮ್ಮ, ಟಿ. ಬಸವರಾಜ, ಕೆ. ಕಾಳಿಂಗ, ರಾಮರಾಜು, ಕೆ. ವೀರೇಶ, ರಾಘವೇಂದ್ರ, ವೀರೇಶ ಡಿ. ಇದ್ದರು.
ವಿದ್ಯುತ್ ಸಮಸ್ಯೆ ಕುರಿತು ತಾಲ್ಲೂಕು ಪಂಚಾಯಿತಿ ಇ.ಒ. ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಮನಕ್ಕೆ ತರಲಾಗಿದೆವೀರಪ್ಪ ಪಿಡಿಒ ಬಲಕುಂದಿ ಗ್ರಾಮ ಪಂಚಾಯಿತಿ
ಗ್ರಾಮ ಪಂಚಾಯಿತಿಯವರು ಈವರೆಗೆ ಆರ್.ಆರ್. ನಂಬರ್ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅರ್ಜಿ ಸಲ್ಲಿಸಿದರೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದುಯಲ್ಲಪ್ಪ ಜೆಸ್ಕಾಂ ಸಹಾಯಕ ಎಂಜಿನಿಯರ್ ತೆಕ್ಕಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.