ADVERTISEMENT

ಹಂಪಿ ಸಾಲು ಮಂಟಪದಲ್ಲಿ ಆತ್ಮಹತ್ಯೆಗೆ ಶರಣಾದವರು ಆಂಧ್ರದವರು

ಸೋಮವಾರ ವಿಷ ಪ್ರಾಶನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 7:45 IST
Last Updated 1 ಡಿಸೆಂಬರ್ 2020, 7:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ: ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಸಮೀಪದ ಸಾಲು ಮಂಟಪದಲ್ಲಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಮಹಿಳೆಯರು ಆಂಧ್ರ ಪ್ರದೇಶದವರು ಎಂದು ಮಂಗಳವಾರ ಗೊತ್ತಾಗಿದೆ.

ಆಂಧ್ರದ ಅನಂತಪುರ ಜಿಲ್ಲೆಯ ಮೀನಾಕ್ಷಮ್ಮ(52), ಕಮಲಮ್ಮ(50) ಎಂದು ತಿಳಿದು ಬಂದಿದೆ. ‘ಇಬ್ಬರು ಸಹೋದರಿಯವರು ನ. 28ರಂದು ಊರು ಬಿಟ್ಟು ಹಂಪಿ ರಥಬೀದಿಯ ಸಾಲು ಮಂಟಪದಲ್ಲಿ ತಂಗಿದ್ದರು. ಬಹಳ ಹೊತ್ತು ಅಲ್ಲಿಯೇ ಇದ್ದ ಅವರನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ ವಿಚಾರಿಸಲು ಹೋಗಿದ್ದಾಗ ಇಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾದ ನಂತರ ಇಬ್ಬರ ಮೃತದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿತ್ತು. ಆದರೆ, ಯಾವ ಕಾರಣಕ್ಕಾಗಿ ಜೀವ ತ್ಯಜಿಸಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ’ ಎಂದು ಹಂಪಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತುಂಗಭದ್ರಾ ನದಿ ಪುಷ್ಕರ ಮಹೋತ್ಸವಕ್ಕೆ ಹಂಪಿಗೆ ನಿತ್ಯ ಸಾವಿರಾರು ಜನ ಬರುತ್ತಿದ್ದಾರೆ. ಇಷ್ಟೊಂದು ಜನರಿರುವಾಗಲೇ ಘಟನೆ ನಡೆದಿರುವುದಕ್ಕೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.