ಸಿರುಗುಪ್ಪ: ‘ಯೋಗ ಕೌಶಲಕ್ಕೆ ಜಗತ್ತಿಗೆ ನಮ್ಮ ದೇಶ ಮಾದರಿಯಾಗಿದೆ. ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ’ ಎಂದು ಸಮಾಜಶಾಸ್ತ್ರದ ಉಪನ್ಯಾಸಕಿ ಈರಮ್ಮ ರುದ್ರಪ್ಪ ಹೇಳಿದರು.
ನಗರದ ಹೊನ್ನೂರಮ್ಮ ಎಂ. ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (‘ಎ’ ಮತ್ತು ‘ಬಿ’ ಘಟಕಗಳಿಂದ)ಯಿಂದ ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಅವರು ಮಾತನಾಡಿದರು.
ಇಂದಿನ ಯುವಕರು ಸೂಕ್ತ ಮಾರ್ಗದರ್ಶನ ಇಲ್ಲದೇ ದಾರಿತಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಕಲಿಕಾ ಕೌಶಲ ಸಂಪನ್ಮೂಲ ವ್ಯಕ್ತಿ ನರೇಶ್ ಮಾತನಾಡಿದರು.
ಶಿಬಿರಾಧಿಕಾರಿಗಳಾದ ಕೃಷ್ಣಪ್ಪ, ಕೆ.ಎಂ. ಚಂದ್ರಕಾಂತ, ಉಪನ್ಯಾಸಕರಾದ ರುದ್ರಪ್ಪ, ನಿಂಗಪ್ಪ, ತಿರುಪತಿ, ಗ್ರಂಥಪಾಲಕ ಯಮನೂರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.