ADVERTISEMENT

ಅಳಿವಿನಂಚಿನಲ್ಲಿ ಜನಪದ ಕಲೆ–ವಿಷಾದ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 9:08 IST
Last Updated 17 ಡಿಸೆಂಬರ್ 2013, 9:08 IST

ವಿಜಯಪುರ: ‘ಯುವ ಜನತೆ ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗಿದ್ದು  ಜನಪದ ಕಲೆಗಳು ಅಳಿವಿನಂಚಿಗೆ ಹೋಗುತ್ತಿವೆ’ ಎಂದು ಮಾಜಿ ಶಾಸಕ ಡಿ.ಎಸ್‌.ಗೌಡರು ವಿಷಾದ ವ್ಯಕ್ತಪಡಿಸಿದರು.

ಸಮೀಪದ ಯಲಿಯೂರು ಗ್ರಾಮ ದಲ್ಲಿ ಬೆಂಗಳೂರು ಗ್ರಾಮಾಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡಿಬೆಲೆ ಸುರಭಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಸ್ಥಳೀಯ ಕಾರ್ಯಕ್ರಮದ ಯೋಜ ನೆಯಡಿ ಏರ್ಪಡಿಸಿದ್ದ ಸುಗಮ ಸಂಗೀತ ಗಾಯನ   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಸ್. ಹನುಮಂತ ರಾಯಪ್ಪ ಮಾತನಾಡಿ, ‘ಜನಪದ ಸೊಗಡು ಮತ್ತು ಕಲೆ ಬಗ್ಗೆ ಪ್ರೀತಿ ಬೆಳೆಸಲು ಇಂಥ ಕಾರ್ಯಕ್ರಮ ಅವಶ್ಯ’ ಎಂದರು.

ಯಲಿಯೂರು ಗ್ರಾ.ಪಂ.ಅಧ್ಯಕ್ಷ ಎಚ್‌.ಮುನಿಯಪ್ಪ ಮಾತನಾಡಿ, ‘ದೇಶಿ ಕಲೆಯ ಕುರಿತು ಕೀಳರಿಮೆ ಹೊಂದು ವುದು ಸರಿಯಲ್ಲ. ವ್ಯಕ್ತಿ ಎಷ್ಟೇ ಆಧುನಿಕ ತೆಗೆ ತೆರೆದುಕೊಂಡರೂ  ಸಂಸ್ಕೃತಿ, ಸಂಸ್ಕಾರ ಮರೆಯಬಾರದು’ ಎಂದರು.

ಯೋಗ ಶಿಕ್ಷಕ ಅಶ್ವತ್ಥ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿದರು. ಯಲಿಯೂರು ಗ್ರಾ.ಪಂ.ಸದಸ್ಯ ಆನಂದ್‌ಗೌಡ,  ಮಾತನಾಡಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ವೈ.ಡಿ.ನಾಗರಾಜು, ಗ್ರಾ.ಪಂ. ಸದಸ್ಯೆ ರೂಪಾ ಚಿಕ್ಕಣ್ಣ, ಮುನಿಶಾಮಪ್ಪ, ಎಂ.ಮುನಿಯಪ್ಪ, ಎಂಪಿಸಿಎಸ್‌ ಅಧ್ಯಕ್ಷ ಜಯಚಂದ್ರ, ಕಲಾವಿದ ಆಂಜಿನಪ್ಪ, ಮಂಡಿಬೆಲೆ ಸುರಭಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಕಾರ್ಯದರ್ಶಿ ವಿ.ಅರ್ಚನಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.