ADVERTISEMENT

ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:30 IST
Last Updated 26 ಸೆಪ್ಟೆಂಬರ್ 2013, 6:30 IST

ಆನೇಕಲ್: ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ ಹಾಗಾಗಿ ನಿಯಮಿತ ಆರೋಗ್ಯ ತಪಾಸಣೆಯಿಂದ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸ ಬಹುದು ಎಂದು ಶಾಸಕ ಬಿ.ಶಿವಣ್ಣ ನುಡಿದರು.

ಅವರು ತಾಲೂ್ಲಕಿನ ಚಂದಾಪುರದ ಸರ್ಕಾರಿ ಆಸ್ಪತೆ್ರಯ ಆವರಣದಲ್ಲಿ ಚಿನ್ಮಯ ಸೇವಾ ಸಂಸೆ್ಥ ಮತು್ತ ನಾರಾಯಣ ನೇತಾ್ರಲಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕೆ್ಕ ಚಾಲನೆ ನೀಡಿ ಮಾತನಾಡಿದರು.

40ವರ್ಷದ ನಂತರ ಕಣಿ್ಣನ ಸಮಸೆ್ಯಗಳು ಕಂಡುಬರುತ್ತವೆ. ಸೂಕ್ತ ಚಿಕಿತೆ್ಸ ಪಡೆಯುವ ಮೂಲಕ ಸಮಸೆ್ಯ ಗಳನು್ನ ನಿವಾರಿಸಿಕೊಳ್ಳಬೇಕು. ಸಂಘ ಸಂಸೆ್ಥಗಳು ಉಚಿತ ಆರೋಗ್ಯ ತಪಾಸಣೆ ಗಳ ಮೂಲಕ ಜನರಲ್ಲಿ ಆರೋಗ್ಯದ ಬಗೆ್ಗ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವುದು ಶಾ್ಲಘನೀಯ ಎಂದರು. ಶಿಬಿರದಲ್ಲಿ 500ಮಂದಿ ತಪಾಸಣೆ ಗೊಳಗಾದರು. 90 ಮಂದಿಗೆ ಶಸ್ತ್ರ ಚಿಕಿತೆ್ಸಗೆ ಗುರುತಿಸ ಲಾಗಿದೆ, 200 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು ಎಂದು ಸಂಸೆ್ಥಯ ಅಧ್ಯಕ್ಷ ಚಿನ್ನಪ್ಪ ಚಿಕ್ಕಹಾಗಡೆ ತಿಳಿಸಿದರು.

ಜಿ.ಪಂ.ಸದಸ್ಯ ಎಂ.ಪ್ರಭಾಕರರೆಡ್ಡಿ, ತಾಲೂ್ಲಕು ಅಧ್ಯಕ್ಷ ಮುರಳಿಕೃಷ್ಣ, ಗಾ್ರಪಂ ಅಧ್ಯಕೆ್ಷ ನಾಗವೇಣಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.