ADVERTISEMENT

ಕಾಡಾನೆ ದಾಳಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 13:47 IST
Last Updated 21 ಜೂನ್ 2013, 13:47 IST

ಕನಕಪುರ: ಕಾಡಾನೆಗಳ ಹಿಂಡು ರೈತನನ್ನು ತುಳಿದು ಸಾಯಿಸಿರುವ ಘಟನೆ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಚಿಲಂದವಾಡಿ ಅರಣ್ಯದಲ್ಲಿ ಗುರುವಾರ ನಡೆದಿದೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಬೋರನದೊಡ್ಡಿ ಗ್ರಾಮದ ಅಂಬೇಡ್ಕರ್ ಕಾಲೊನಿ ನಿವಾಸಿ ದೇವಯ್ಯ(65) ಮೃತ ವ್ಯಕ್ತಿ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, 5 ಪುತ್ರಿಯರಿದ್ದಾರೆ. ಗುರುವಾರ ಬೆಳಿಗ್ಗೆ ಗ್ರಾಮದ ಪಕ್ಕದಲ್ಲಿರುವ ಕೆರೆಯ ಬಳಿ ಕಾಲು ದಾರಿಯಲ್ಲಿ ದೇವಯ್ಯ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಯ ಹಿಂಡು ದಾಳಿ ಮಾಡುತ್ತಿದ್ದಂತೆ ಗ್ರಾಮಸ್ಥರು ಕೂಗಿಕೊಂಡಿದ್ದಾರೆ. ಜನರ ಧ್ವನಿಗೆ ಹೆದರಿ ಆನೆಗಳು ಸ್ಥಳದಿಂದ ಹೋಗಿವೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ದೇವಯ್ಯ ಅವರನ್ನು ಕನಕಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ. ಸಾತನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸುನಿತಾಬಾಯಿ ಮತ್ತು ಸಾತನೂರು ಉಪ ವಲಯ ಅರಣ್ಯಾಧಿಕಾರಿ ಭೈರವ ಸಾರ್ವಜನಿಕ ಆಸ್ಪತ್ರೆಗೆ ಬಂದು ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.