ADVERTISEMENT

ಪ್ರಕಾಶ್, ಗುಡಿಗೇರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ವಿಜಯಪುರ: ಇಲ್ಲಿನ ಶ್ರೀ ಬಸವೇಶ್ವರ ಬೋಧನಾ ಕೇಂದ್ರದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಕಲಾವಿದ ಎನ್.ಬಸವರಾಜ ಗುಡಿಗೇರಿ ಅವರ ಶ್ರದ್ಧಾಂಜಲಿ ಸಮರ್ಪಣ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಿ.ಬಸವರಾಜೇಂದ್ರಪ್ಪ ನುಡಿನಮನ ಸಲ್ಲಿಸಿ, ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಎಂ.ಪಿ.ಪ್ರಕಾಶ್ ವೈಚಾರಿಕತೆ ಆರಾಧಕರಾಗಿದ್ದರು. ರಾಜಕೀಯ, ಸಾಹಿತ್ಯ ಮತ್ತು ರಂಗಭೂಮಿಯ ಚಿಂತಕರಾಗಿದ್ದರೆಂದು ಬಣ್ಣಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ರಾಜಕೀಯದಲ್ಲಿ ಅಜಾತ ಶತ್ರುವಾಗಿದ್ದ ಪ್ರಕಾಶ್ ರಾಜಕೀಯ ವೈಫಲ್ಯಗಳನ್ನು ಗುರುತಿಸಿ ಸಾಧನೆಗೆ ಒತ್ತುಕೊಡುತ್ತಿದ್ದರು ಎಂದು ವಿವರಿಸಿದರು.ನಾಟಕರಂಗದಲ್ಲಿ ಗುಡಿಗೇರಿ ಅವರ ಸಾಧನೆ ಅಪೂರ್ವ. ಅವರ ಅಗಲಿಕೆಯಿಂದ ರಂಗಭೂಮಿ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಸ್ಮರಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಅಧ್ಯಕ್ಷ ಎನ್.ಪುಟ್ಟರಾಜು, ಜೆಸಿಐ ಅಧ್ಯಕ್ಷ ಎಸ್.ವಿ.ಬಸವರಾಜು, ಕಲಾವಿದ ಎಂ.ವಿ.ನಾಯ್ಡು, ಮ.ಸುರೇಶ್‌ಬಾಬು, ಎಂ.ಶಿವಕುಮಾರ್, ಬಸವರಾಜು, ವಿ.ಎನ್.ರಮೇಶ್, ರಾಮಸ್ವಾಮಿ ಭಟ್ಟಾಚಾರ್ಯ, ಮತ್ತಿತರರು ಇದ್ದರು. ಚಂದ್ರಶೇಖರಹಡಪದ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.