ADVERTISEMENT

ಮೃತ ರಾಸುಗಳಿಗೆ ಪರಿಹಾರ ವಿತರಣೆ

ದೇವನಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚಿದ ಕಾಲುಬಾಯಿ ಜ್ವರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 10:08 IST
Last Updated 2 ಡಿಸೆಂಬರ್ 2013, 10:08 IST

ದೇವನಹಳ್ಳಿ: ಇತ್ತಿಚೆಗೆ ಕಾಲುಬಾಯಿ ಜ್ವರ ಹಾಗೂ ಇತರೆ ರೋಗಗಳಿಂದ ಮರಣಹೊಂದಿದ ಪಶುಗಳಿಗೆ 6.91 ಲಕ್ಷ ರೂ ಮೊತ್ತದ ಪರಿಹಾರದ ಚೆಕ್ಕನ್ನು ಶಾಸಕ ಪಿಳ್ಳಮುನಿಶ್ಯಾಮಪ್ಪ ಪಶು ಮಾಲೀಕರಿಗೆ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ವಿತರಿಸಿದರು.

ನಂತರ ಮಾತನಾಡಿದ ಅವರು ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯತನ ದಿಂದ ಕಾಲು ಬಾಯಿ ಜ್ವರದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಪರಿಣಾಮ ಪಶುಪಾಲಕರು ನಷ್ಠ ಅನು ಭವಿಸುವಂತಾಯಿತು. ಮುಂದೆ ಈ ರೀತಿ ಆಗಬಾರದು. ತಾಲ್ಲೂಕಿನಲ್ಲಿ ಹೈನು ಗಾರಿಗೆ ಉತ್ತಮ ಸ್ಥಿತಿಯಲ್ಲಿದೆ. ಹಣ ಪಡೆದ ಮಾಲಿಕರು ಪಶುಗಳನ್ನು ಸಾಧ್ಯ ವಾದರೆ ಖರೀದಿಸಿ. ಇಲ್ಲದಿದ್ದಲ್ಲಿ ಕುರಿ, ಮೇಕೆಗಳಂತಹ ಪ್ರಾಣಿಗಳ ಪಾಲನೆಗೆ ಮುಂದಾಗಿ ಸರ್ಕಾರದ ಪರಿಹಾರದ ಹಣ ಸದುಪಯೋಗ ಮಾಡಿಕೊಳ್ಳ ಬೇಕು ಎಂದರು.

ಪಶು ವೈದ್ಯಕೀಯ ಇಲಾಖೆ ಜಿಲ್ಲಾ ನಿರ್ದೇಶಕ ಜಗನ್ನಾಥ್ ಮಾತನಾಡಿ, ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 48 ಜಾನುವಾರುಗಳು ಮರಣ ಹೊಂದಿ ದ್ದವು. ಅವುಗಳಲ್ಲಿ ಎರಡಕ್ಕೆ ಮಾತ್ರ ವಿಮೆ ಮಾಡಿಸಲಾಗಿತ್ತು. ಇನ್ನುಳಿದ 46 ರ ಪೈಕಿ 21 ಮಿಶ್ರ ತಳಿ ಹಸುಗಳಿಗೆ ತಲಾ 25 ಸಾವಿರ, 11 ಪಡ್ಡೆಗಳಿಗೆ ತಲಾ 10 ಸಾವಿರ, 12 ಕರುಗಳಿಗೆ ತಲಾ 5 ಸಾವಿರ ಎಮ್ಮೆ ಒಂದಕ್ಕೆ 20 ಸಾವಿರ ಎಮ್ಮೆ ಪಡ್ಡೆ ಒಂದಕ್ಕೆ 10 ಸಾವಿರ ವಿತರಿಸಲಾಗುತ್ತಿದೆ ಎಂದರು.

ಪಾಲಕರು ಲಸಿಕೆಗೆ ಬಗ್ಗೆ ನಿರ್ಲಕ್ಷ್ಯ ತೋರದೆ ಕಡ್ಡಾಯವಾಗಿ ಹಾಕಿಸಲೇ ಬೇಕು ಎಂದು ಸಲಹೆ ನೀಡಿದರು.

ಬಮುಲ್‌ ನಿರ್ದೇಶಕ ಎ ಸೋಮಣ್ಣ ಮಾತನಾಡಿ, ‘ಸರ್ಕಾರ ತಲಾ ಒಂದು ಪಶುವಿಗೆ 16.500 ಮತ್ತು ಒಕ್ಕೂಟ ದಿಂದ 8.600 ರೂಪಾಯಿ ಸೇರಿಸಿ 25 ಸಾವಿರ ನೀಡಲಾಗುತ್ತಿದೆ ಪ್ರತಿ ಬಾರಿ ಸಭೆ ನಡೆಸಿ ಅರಿವು ಮೂಡಿಸಲಾಗುತ್ತಿ ದ್ದರೂ ಪಾಲಕರು ಲಸಿಕೆ ಹಾಕಿಸುವ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. 80 ಸಾವಿರ ದಿಂದ ಒಂದೂವರೆ ಲಕ್ಷದವರೆವಿಗೂ  ಪಶುಗಳಿವೆ. ಏನೇ ಆದರೂ ಅಂತಿಮ ವಾಗಿ ನಷ್ಟ ಪಾಲಕರಿಗೇ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕು ಎಂದರು.

ತಹಶೀಲ್ದಾರ್‌ ಡಾ.ಎನ್‌.ಸಿ ವೆಂಕಟ ರಾಜು, ಜಿಲ್ಲಾ ಸಹಕಾರ ಯೂನಿ ಯನ್‌ ನಿರ್ದೇಶಕ ದೇವರಾಜ್‌,  ಪಿ. ಪಟಾಲಪ್ಪ, ಜೆ.ಡಿ.ಎಸ್‌ ಅಧ್ಯಕ್ಷ ಮುನಿ ಶ್ಯಾಮೇಗೌಡ,  ಹಾಲು ಒಕ್ಕೂಟ ಶಿಬಿರ ಕಚೇರಿ ವ್ಯವಸ್ಥಾಪಕ ಗಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.