ADVERTISEMENT

ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಪ್ರಸಾದಕ್ಕೆ 10 ಸಾವಿರ ಲಡ್ಡು ತಯಾರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:29 IST
Last Updated 4 ಜುಲೈ 2025, 15:29 IST
ವಿಜಯಪುರ ಸಮೀಪದ ಹಾರ್ಡಿಪುರದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಭಕ್ತರಿಗೆ ಪ್ರಸಾದವಾಗಿ ಹಂಚಲು 10 ಸಾವಿರ ಲಡ್ಡು ತಯಾರಿಸುತ್ತಿರುವುದು 
ವಿಜಯಪುರ ಸಮೀಪದ ಹಾರ್ಡಿಪುರದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಭಕ್ತರಿಗೆ ಪ್ರಸಾದವಾಗಿ ಹಂಚಲು 10 ಸಾವಿರ ಲಡ್ಡು ತಯಾರಿಸುತ್ತಿರುವುದು    

ವಿಜಯಪುರ (ದೇವನಹಳ್ಳಿ): ಪಟ್ಟಣ ಸಮೀಪದ ಹಾರ್ಡಿಪುರದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಭಕ್ತರಿಗೆ ಪ್ರಸಾದ ಹಂಚಲು 10 ಸಾವಿರ ಲಡ್ಡು ತಯಾರಿಸಲಾಗಿದೆ.

ದೇವಾಲಯದಲ್ಲಿ ಜುಲೈ 5ರಿಂದ ಮೂರು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮಕ್ಕೆ ಬುಳ್ಳಹಳ್ಳಿ ಆದಿಮಹಾಪರಾಶಕ್ತಿ ಸಂಸ್ಥಾನ ಮಠದ ಸಾಯಿ ಮಂಜುನಾಥ ಸ್ವಾಮಿ, ಶಿವನಾಪುರ ಆದಿಶಕ್ತಿ ಸಂಸ್ಥಾನ ಮಠದ ಪ್ರಣವಾನಂದಸ್ವಾಮಿ, ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇವಾಲಯದ ಧರ್ಮದರ್ಶಿ ನಾಗರಾಜಪ್ಪಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್, ವಿ.ಶಾಂತಕುಮಾರ್, ಸೀಕಲ್ ರಾಮಚಂದ್ರಗೌಡ, ಭವ್ಯಾ ಮಹೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯದ ಧರ್ಮಧಿಕಾರಿ ಶ್ರೀನಿವಾಸಪ್ಪ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.