ವಿಜಯಪುರ: ಪಟ್ಟಣದ ಜಿ.ಎಂ. ಸರ್ಕಲ್‌ನಲ್ಲಿ ವಾಸವಾಗಿರುವ ಶೌಕದ್ ಬಾಬು ಅವರ ಮನೆಯಲ್ಲಿನ ಬೀರುವಿನ ಬೀಗ ಮುರಿದು ₹ 2 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಲಾಗಿದೆ.
ಬೆಂಗಳೂರಿಗೆ ಕುಟುಂಬ ಸಮೇತರಾಗಿ ಅವರು ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಕಳವು ಮಾಡಲಾಗಿದೆ. ಮದುವೆ ಮುಗಿಸಿಕೊಂಡು ವಾಪಸ್ ಬಂದು ನೋಡಿದಾಗ ಬೀರುವಿನ ಬೀಗ ಮುರಿದು ಕಳವು ಮಾಡಿರುವುದು ಕಂಡುಬಂದಿದೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.