ADVERTISEMENT

ಕೋವಿಡ್- 19 | 40 ಮಂದಿಯ ವರದಿ ಪಾಸಿಟಿವ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 4:06 IST
Last Updated 17 ಜುಲೈ 2020, 4:06 IST
ಗ್ರಾಮ ಸಹಾಯಕರ ಹಕ್ಕೋತ್ತಾಯಗಳ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್‌ ನಾಯ್ಕ್‌ ಅವರಿಗೆ ಸಲ್ಲಿಕೆ
ಗ್ರಾಮ ಸಹಾಯಕರ ಹಕ್ಕೋತ್ತಾಯಗಳ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್‌ ನಾಯ್ಕ್‌ ಅವರಿಗೆ ಸಲ್ಲಿಕೆ   

ದೊಡ್ಡಬಳ್ಳಾಪುರ:ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಂದೇ ದಿನ 40 ಮಂದಿಗೆ ಕೋವಿಡ್‌-19 ದೃಢ ಪಟ್ಟಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನರು ಆತಂಕಗೊಂಡಿದ್ದು, ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.

ಈ ಹಿಂದೆ ಒಂದೇ ದಿನ ಹತ್ತು ಜನರಲ್ಲಿ ಸೋಂಕು ದೃಢಪಟ್ಟಿತ್ತು. ಈ ಸಂಖ್ಯೆಯೇ ಹೆಚ್ಚು ಎಂದು ಜನ ಭಾವಿಸಿದ್ದರು. ಆದರೆ, ಗುರುವಾರ ಒಂದೇ ದಿನ 40 ಮಂದಿಯ ಪರೀಕ್ಷಾ ವರದಿ ಪಾಸಿಟಿವ್‌ ಆಗಿದೆ.

ವರದಿ ಬರುತ್ತಿದ್ದಂತೆ ನಗರದಲ್ಲಿ ಲಾಕ್‌ಡೌನ್‌ ಅನ್ನು ಪೊಲೀಸರು ಬಿಗಿಗೊಳಿಸಿದರು. ನಗರದೊಳಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿಟ್ಟು, ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು. ಕೆಲವರಿಗೆ ಎಚ್ಚರಿಸಿ ಕಳುಹಿಸಿದರು.

ADVERTISEMENT

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ನಿತ್ಯದಂತೆ ಹಣ್ಣು, ತರಕಾರಿ ವಹಿವಾಟು ನಡೆಯಿತಾದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಲಾಕ್‌ಡೌನ್‌ ಇದ್ದರೂ ಸಹ ಬೆಳಿಗ್ಗೆ 12 ಗಂಟೆವರೆಗೂ ಅಗತ್ಯ ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ನಗರದ ದೇಶದಪೇಟೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್‌ ದೃಢಪಟ್ಟಿದೆ. ಗುರುವಾರ ಸೋಂಕು ದೃಢ ಪಟ್ಟಿರುವವರಲ್ಲಿ ರೈಲ್ವೆ ನಿಲ್ದಾಣ ಸಮೀಪದ ಬಡಾವಣೆಯಲ್ಲಿ 2 ವರ್ಷದ ಮಗುವು ಸಹ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.