ADVERTISEMENT

ವ್ಯಕ್ತಿಯ ಗಮನ ಬೇರೆಡೆ ಸೆಳೆದು ₹ 5.9 ಲಕ್ಷ ಕಳವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:12 IST
Last Updated 21 ಅಕ್ಟೋಬರ್ 2022, 6:12 IST
ದೊಡ್ಡಬಳ್ಳಾಪುರದ ಸರ್ಕಾರಿ ನೌಕರರ ಭವನದ ಸಮೀಪದ ಉರ್ದು ಶಾಲೆ ಮುಂದೆ ₹5.9 ಲಕ್ಷ ಅಪಹರಿಸಿದ್ದ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್‌ ಗುರುವಾರ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ದೊಡ್ಡಬಳ್ಳಾಪುರದ ಸರ್ಕಾರಿ ನೌಕರರ ಭವನದ ಸಮೀಪದ ಉರ್ದು ಶಾಲೆ ಮುಂದೆ ₹5.9 ಲಕ್ಷ ಅಪಹರಿಸಿದ್ದ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್‌ ಗುರುವಾರ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ದೊಡ್ಡಬಳ್ಳಾಪುರ: ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆ ಸೆಳೆದು ₹ 5.9 ಲಕ್ಷ ನಗದು ದೋಚಿರುವ ಘಟನೆನಗರದ ಸರ್ಕಾರಿ ನೌಕರರ ಭವನ ಸಮೀಪದ ಉರ್ದು ಶಾಲೆಯ ಮುಂಭಾಗ ಬುಧವಾರ ನಡೆದಿದೆ.

ಜಮೀನು ನೋಂದಣಿಗಾಗಿ ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ನಾಗರಾಜ್‌ ಹಣ ಕಳೆದುಕೊಂಡವರು. ತಾಂತ್ರಿಕ ತೊಂದರೆಯಿಂದ ಜಮೀನಿನ ನೋಂದಣಿಯಾಗಿರಲಿಲ್ಲ. ಹಾಗಾಗಿ, ಕಾರಿನ ಬಳಿಗೆ ಬಂದ ಅವರು ಹಿಂಬದಿ ಸೀಟ್‌ನಲ್ಲಿ ಹಣದ ಬ್ಯಾಗ್‌ ಇಟ್ಟು ಕಾರು ಹತ್ತುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳಕ್ಕೆ
ಬಂದಿದ್ದಾನೆ.

ಕಾರಿನಿಂದ ಆಯಿಲ್‌ ಸೂರುತ್ತಿದೆ ಎಂದು ನಾಗರಾಜ್‌ ಅವರ ಗಮನವನ್ನು ಬೇರೆಡೆ ಸೆಳೆದು ಹಣದ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗಿದ್ದಾನೆ.

ADVERTISEMENT

ದುಷ್ಕರ್ಮಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್‌ ಅವರು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸರ್ಕಲ್‌ ಇನ್‌ಸ್ಪೆಕ್ಟರ್‌ ಹರೀಶ್‌, ರೇಣುಕಾ ಯಾದವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.