ಆನೇಕಲ್ : ಬಿಎಂಟಿಸಿ ಬಸ್‌ಯೊಂದು ಎರಡು ದ್ವಿಚಕ್ರ ವಾಹನ ಮತ್ತು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಜಂಗಲ್‌ಪಾಳ್ಯದ ಬಳಿ ಗುರುವಾರ ನಡೆದಿದೆ.
ಮೃತ ಪ್ರಯಾಣಿಕ ಆಂಧ್ರಪ್ರದೇಶ ಮೂಲದ ಕೆ.ಬಿ.ಪ್ರಸಾದ್ ರಾವ್(60) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕಡೆಗೆ ಹೊರಟಿದ್ದ ಬಿಎಂಟಿಸಿ ಬಸ್‌ಗೆ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ವಾಹನ ತಿರುಗಿಸಿದ್ದರಿಂದ ಎರಡು ದ್ವಿಚಕ್ರ ವಾಹನ ಮತ್ತು ಟಾಟಾ ಏಸ್‌ಗೆ ಡಿಕ್ಕಿ ಬಸ್ ಹೊಡೆದಿದೆ. ಅಲ್ಲಿಯೇ ರಸ್ತೆ ಬದಿ ನಿಂತಿದ್ದ ಪ್ರಸಾದ್ ರಾವ್‌ಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅಪಘಾತದಿಂದಾಗಿ ಇಬ್ಬರು ಬೈಕ್ ಸವಾರರು ಮತ್ತು ಬಸ್‌ನಲ್ಲಿದ್ದ ಪ್ರಯಾಣಿಕನೊಬ್ಬ ಸೇರಿದಂತೆ ಮೂರು ಮಂದಿ ಗಾಯಗೊಂಡಿದ್ದಾರೆ. ಕ್ರೇನ್ ಮೂಲಕ ಬಸ್ ಮತ್ತು ಟಾಟಾ ಏಸ್ ವಾಹನ ತೆರವುಗೊಳಿಸಲಾಯಿತು. ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.