ADVERTISEMENT

ಶಿಡ್ಲಘಟ್ಟ: ಟೊಮೆಟೊ ಸಾಗಿಸುತ್ತಿದ್ದ ವಾಹನ ಪಲ್ಟಿ

​ಪ್ರಜಾವಾಣಿ ವಾರ್ತೆ
Published 1 ಮೇ 2024, 13:37 IST
Last Updated 1 ಮೇ 2024, 13:37 IST
ಶಿಡ್ಲಘಟ್ಟ ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿ ಮುಗುಚಿ ಬಿದ್ದ ಟೆಂಪೊ
ಶಿಡ್ಲಘಟ್ಟ ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿ ಮುಗುಚಿ ಬಿದ್ದ ಟೆಂಪೊ   

ಶಿಡ್ಲಘಟ್ಟ: ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್‌ ಬಳಿ ಬುಧವಾರ ಟೊಮೆಟೊ ಸಾಗಿಸುತ್ತಿದ್ದ ವಾಹನ ಮುಗುಚಿ ಬಿದ್ದಿದೆ. ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಂತಾಮಣಿಯಿಂದ ಟೊಮೆಟೊ ಖರೀದಿಸಿ ಹಾವೇರಿಗೆ ಸಾಗಣೆ ಮಾಡುವ ವೇಳೆ ಅವಘಡ ಸಂಭವಿಸಿದೆ.

ಮಧ್ಯ ರಸ್ತೆಯಲ್ಲಿಯೇ ಆಯತಪ್ಪಿ ಕೆಳಕ್ಕೆ ಉರುಳಿದ್ದರಿಂದ ಟೊಮೆಟೊ ಬಾಕ್ಸ್‌ಗಳು ರಸ್ತೆಗೆ ಬಿದ್ದಿದ್ದವು. ಬಾಕ್ಸ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.