ಆನೇಕಲ್ : ಪಟ್ಟಣದ ಸಂತೆಬೀದಿಯ ಓಂಶಕ್ತಿ ದೇವಾಲಯದಲ್ಲಿ ಮೇಲ್ಮರವತ್ತೂರ್ ಆದಿಪರಾಶಕ್ತಿ ಪೂಜಾ ಮಂಡಳಿಯಿಂದ 19ನೇ ವರ್ಷದ ಕಳಸ ದೀಪ ಹೋಮ ಪೂಜೆ ಮತ್ತು ಆಷಾಡ ಮಾಸ ಆಡಿಪುರಂ ಗಂಜಿಪೂಜೆ ಹಾಗೂ ಕ್ಷೀರಾಭಿಷೇಕ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಸಂತೆ ಬೀದಿಯ ಓಂಶಕ್ತಿ ದೇವಾಲಯದಲ್ಲಿ ಶುಕ್ರವಾರ ಬೆಳಗಿನಿಂದಲೂ ನೂರಾರು ಮಂದಿ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಆಡಿಪುರಂ ಗಂಜಿಪೂಜೆಯ ಪ್ರಯುಕ್ತ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 5ಗಂಟೆಗೆ ಸುಪ್ರಭಾತ, ಕಳಸ ದೀಪ ಹೋಮಗಳು ನಡೆದವು.
9ಗಂಟೆಯಿಂದಲೂ ನೂರಾರು ಮಂದಿ ಮಹಿಳೆಯರು ಬೆಂಕಿ ಮಡಿಕೆಯನ್ನು ಹೊತ್ತು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಆಡಿಪುರಂ ಗಂಜಿಪೂಜೆಯ ಪ್ರಯುಕ್ತ ವಿಶೇಷ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.