ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಮಂಗಳವಾರ ರೆಬಲ್ ಸ್ಟಾರ್ ಅಂಬರೀಷ್ ಅವರ ಪುಣ್ಯತಿಥಿ ಆಯೋಜಿಸಲಾಗಿತ್ತು.
ಗ್ರಾಮದಲೆಲ್ಲಾ ಅಂಬರೀಷ್ ಅವರ ಬ್ಯಾನರ್ ಹಾಗೂ ಪ್ಲೆಕ್ಸ್‌ಕಟ್ಟಲಾಗಿತ್ತು. ಅಂಬರೀಷ್ ಭಾವಚಿತ್ರಕ್ಕೆ ಪೂಜೆ ಮಾಡಿ, ಎಡೆ ಇರಿಸಲಾಗಿತ್ತು.
ನಂತರ ಗ್ರಾಮಸ್ಥರಿಗೆ ಬಾಡೂಟ ಹಾಕಿಸಲಾಯಿತು.ಗ್ರಾಮದ ಅಂಬರೀಷ್ ಅಭಿಮಾನಿ ಬಳಗದ ಜಗದೀಶ್, ಸೊಸೈಟಿ ವೆಂಕಟಸ್ವಾಮಿ, ಆಟೊ ವೆಂಕಿ, ಸತೀಶ್ ಆಟೊ, ಅಂಗಡಿ ರಾಜು, ಕಾಂತರಾಜು, ಕೇಬಲ್ ಶ್ರೀನಿವಾಸ್, ಉಮೇಶ್, ರಾಜೇಶ್, ಅರಸೇಗೌಡ, ಪ್ರಸನ್ನಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.