ADVERTISEMENT

ಆನೇಕಲ್: ₹10 ಮೌಲ್ಯದ ಚಿನ್ನಾಭರಣ, 3 ಲಕ್ಷ ನಗದು ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:32 IST
Last Updated 9 ಡಿಸೆಂಬರ್ 2025, 2:32 IST
<div class="paragraphs"><p>ಕಳ್ಳತನ</p></div>

ಕಳ್ಳತನ

   

ಆನೇಕಲ್: ತಾಲೂಕಿನ ಚಂದಾಪುರದಲ್ಲಿ ಊರಿಗೆ ಹೋದ ಕುಟುಂಬದ ಮನೆ ಹಾಗೂ ಕ್ಲಿನಿಕ್‌ನ ಬೀಗ ಒಡೆದು ಕಳ್ಳರು ₹10 ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.

ಎಎನ್ಆರ್ ಕಲ್ಯಾಣ ಮಂಟಪದ ಬಳಿಯ ಧನುಷ್ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ₹50,000 ನಗದು ಮತ್ತು 80 ಗ್ರಾಂ ಚಿನ್ನ, ಒಂದು ಡೈಮಂಡ್ ಉಂಗುರ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ADVERTISEMENT

ಹುಟ್ಟೂರಿಗೆ ಹೋಗಿದ್ದ ಧನುಷ್ ಮರಳಿ ಸೋಮವಾರ ಮನೆಗೆ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಎಎನ್‌ಆರ್‌ ಕಲ್ಯಾಣ ಮಂಟಪದ ಸಮೀಪದಲ್ಲಿಯೇ ಇದ್ದ ಸಂಗಮೇಶ್ವರ ಕ್ಲಿನಿಕ್ ಬೀಗ ಹೊಡೆದ ಕಳ್ಳರು ಕ್ಯಾಶ್ ಕೌಂಟರ್‌ನಲ್ಲಿದ್ದ ₹3 ಲಕ್ಷ ನಗದು ಕಳವು ಮಾಡಿದ್ದಾರೆ.

ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.