
ಪ್ರಜಾವಾಣಿ ವಾರ್ತೆ
ಆನೇಕಲ್ : ತಾಲ್ಲೂಕಿನ ತಟ್ಟನಹಳ್ಳಿ ಗ್ರಾಮದ ರೈತ ಕುಟುಂಬವೊಂದು 14 ಎಕರೆ ಜಮೀನಿನಲ್ಲಿ ಸುಮಾರು 200 ಕ್ವಿಂಟಲ್ ರಾಗಿ ಫಸಲು ತಗೆದಿದೆ.
ಗ್ರಾಮದ ಪ್ರಗತಿಪರ ರೈತರಾದ ಶಾಂತಮ್ಮ ಮತ್ತು ಬೈರೇಗೌಡ ಶನಿವಾರ ರಾಗಿ ರಾಶಿಗೆ ಪೂಜೆ ಸಲ್ಲಿಸಿ, ಗ್ರಾಮಸ್ಥರಿಗೆ ಸಿಹಿ ಹಂಚಿ ಸಂಭ್ರಮಿಸಿದೆ.
ರಾಗಿ ಕಣಜ ಆನೇಕಲ್‌ನಲ್ಲಿ ಶೇಕಡ 60ರಷ್ಟು ರೈತರು ರಾಗಿ ಬೆಳೆಯುತ್ತಾರೆ. ಈ ವರ್ಷ ಎಂಆರ್1 ತಳಿಯ ರಾಗಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ ಇತರ ತಳಿಗಳಿಗಿಂತ ಹೆಚ್ಚು ಫಸಲು ದೊರೆತಿದೆ ಎಂದು ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.