
ಆನೇಕಲ್: ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಪಟ್ಟಣವು ಪೇಟ ಮತ್ತು ಬಾವುಟಗಳಿಂದ ಕೇಸರಿಮಯವಾಗಿತ್ತು. ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವೀರಗಾಸೆ, ಡೊಳ್ಳುಕುಣಿತ, ಚಂಡೆ, ನಾದಸ್ವರ-ಡೋಲು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಕೇಸರಿ ಶಾಲು ಹೊದ್ದು ಪೇಟ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಪುಟಾಣಿ ಮಕ್ಕಳ ಭಾರತ ಮಾತೆಯ ವೇಷ ಧರಿಸಿ ಗಮನ ಸೆಳೆದರು.
ಭಾರತ್ ಮಾತಾ ಕೀ ಜೈ, ಜೈ ಜೈ ಮಾತಾ ಭಾರತ ಮಾತಾ, ಹಿಂದೂ ನಾವೆಲ್ಲಾ ಒಂದು ಘೋಷಣೆಗಳು ಮುಗಿಲು ಮುಟ್ಟಿದ್ದವು. ಪಟ್ಟಣದ ಹಲವೆಡೆ ಪುಷ್ಪವೃಷ್ಠಿ ಮಾಡುವ ಮೂಲಕ ಶೋಭಾ ಯಾತ್ರೆಯನ್ನು ಬರಮಾಡಿಕೊಂಡರು. ರೈತರು ಎತ್ತುಗಳ ಮೆರವಣಿಗೆ ನಡೆಸಿದರು.
ಮೆರವಣಿಗೆಯ ನಂತರ ಎಲ್ಲಾ ಕಾರ್ಯಕರ್ತರು ಪಟ್ಟಣದ ಶ್ರೀರಾಮ ಕುಟೀರದಲ್ಲಿ ಜಮಾವಣೆಗೊಂಡರು. ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿದ್ಯುತ್ ದೀಪ ಅಲಂಕಾರ ಕಂಗೊಳಿಸುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.