ADVERTISEMENT

ಜಿಗಣಿ ಹೆನ್ನಾಗರ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:21 IST
Last Updated 28 ಫೆಬ್ರುವರಿ 2026, 2:21 IST
ಆನೇಕಲ್ ತಾಲ್ಲೂಕಿನ ಹೆನ್ನಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಕಮ್ಯೂನಿಕೇಶನ್ ಟೆಸ್ಟ್ ಡಿಸೈನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಸ್ಆರ್ ಅನುದಾನದಲ್ಲಿ ನಿರ್ಮಿಸಲಾಗಿದ್ದು ಶುಕ್ರವಾರ ಉದ್ಘಾಟಿಸಲಾಯಿತು
ಆನೇಕಲ್ ತಾಲ್ಲೂಕಿನ ಹೆನ್ನಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಕಮ್ಯೂನಿಕೇಶನ್ ಟೆಸ್ಟ್ ಡಿಸೈನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಸ್ಆರ್ ಅನುದಾನದಲ್ಲಿ ನಿರ್ಮಿಸಲಾಗಿದ್ದು ಶುಕ್ರವಾರ ಉದ್ಘಾಟಿಸಲಾಯಿತು   

ಜಿಗಣಿ (ಆನೇಕಲ್): ಕಮ್ಯೂನಿಕೇಶನ್‌ ಟೆಸ್ಟ್‌ ಡಿಸೈನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಿಎಸ್‌ಆರ್‌ ನಿಧಿ ₹...ಲಕ್ಷ ವೆಚ್ಚದಲ್ಲಿ ಹೆನ್ನಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿರ್ಮಿಸಿರುವ ಕೊಠಡಿಗಳನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಸಿಎಸ್‌ಆರ್‌ ನಿಧಿಯನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸಿಎಸ್‌ಆರ್‌ ನಿಧಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಶಾಲೆಯನ್ನು ದತ್ತು ಪಡೆದು ಶಾಲೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮಂಜುನಾಥ್‌ ತಿಳಿಸಿದರು.

ಕಂಪನಿಗಳು ಸಿಎಸ್‌ಆರ್‌ ನಿಧಿಯನ್ನು ಸ್ಥಳೀಯವಾಗಿ ಬಳಸುವುದರಿಂದ ಇಲ್ಲಿನ ಸರ್ಕಾರಿ ಶಾಲೆ, ಆಸ್ಪತ್ರೆಗಳಿಗೆ ಉಪಯೋಗವಾಗುತ್ತದೆ. ಹಾಗಾಗಿ ಜಿಗಣಿ ಕೈಗಾರಿಕಾ ಪ್ರದೇಶದ ಕಂಪನಿಗಳು, ಕಾರ್ಖಾನೆಗಳು ತಮ್ಮ ಸಿಎಸ್‌ಆರ್‌ ನೆರವನ್ನು ಸುತ್ತಮುತ್ತಲಿನ ಪಂಚಾಯಿತಿಗಳಲ್ಲಿನ ಕೆರೆ, ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗೆ ಬಳಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಜೆ.ಪ್ರಸನ್ನಕುಮಾರ್‌ ತಿಳಿಸಿದರು.

ADVERTISEMENT

ಕಮ್ಯೂನಿಕೇಶನ್ ಟೆಸ್ಟ್ ಡಿಸೈನ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಶೇಖರ್, ಸುರೇಶ್, ಮಿತ್ರದಾರ ಪೌಂಡೇಷನ್‌ ಹರಿಪ್ರಸಾದ್, ಅರುಣ್‌, ಯಶೋಧಾ, ಹರಿಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಲಕ್ಷ್ಮೀನಾಗೇಶ್‌, ಕುಮಾರ್, ನಾಗರಾಜು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.