ಹೊಸಕೋಟೆ: ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಚಾರಣೆ ಪ್ರಯುಕ್ತ ಗರ್ಭಿಣಿ ಮಹಿಳೆಯರಿಗೆ ಸೀಮಂತ, ಮಕ್ಕಳಿಗೆ ಅನ್ನ ಪ್ರಸಾನ, ಪೌಷ್ಟಿಕ ಆಹಾರ ಕಿಟ್ಟ, ಆರೋಗ್ಯವಂತ ಮಗುವಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದರು.
ತಾಲ್ಲೂಕಿನ ನಂದಗುಡಿಯಲ್ಲಿರುವ 2ನೇ ಕೇಂದ್ರವು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಮಾದರಿ ಅಂಗನವಾಡಿ ಕೇಂದ್ರವಾಗಿದೆ. ಇದೇ ರೀತಿಯಲ್ಲೇ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿರುವ 330 ಅಂಗನವಾಡಿ ಕೇಂದ್ರಗಳನ್ನು ಎನ್‌ಜಿಒ ಸಹಯೋಗದೊಂದಿಗೆ ಮೆಲ್ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ಅಂಗನವಾಡಿ ಕೇಂದ್ರವು ಸಾವಯವ ಕೃಷಿ ಕೈತೋಟಗಳನ್ನು ನಿರ್ಮಿಸಿ ಅಲ್ಲಿ ಬೆಳೆದಿರುವ ಕಾಳುಗಳನ್ನು ಮೊಳಕೆ ಕಟ್ಟಿ ಮಕಳಿಗೆ ನಿಡುವಷ್ಟು ಸ್ವಾವಲಂಬಿ ಕೇಂದ್ರಗಳಾಗಬೇಕು ಎಂದರು.
ಜಿಲ್ಲಾ ಮಕ್ಕಳ ಹಕ್ಕುಗಳು ರಕ್ಷಣಾ ಅಧಿಕಾರಿ ಅನಿತಲಕ್ಷ್ಮಿ, ಶಿಶು ಅಭಿವೃದ್ಧಿ ಅಧಿಕಾರಿ ಶಿವಮ್ಮ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಬಿಎಂಆರ್‌ಡಿ ಮಾಜಿ ಅಧ್ಯಕ್ಷ ಸಂಜಯ್ ಗೌಡ, ನಾರಾಯಣಸ್ವಾಮಿ, ಗ್ಯಾರೆಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಬಚ್ಚೇಗೌಡ, ಜಯರಾಜ್ ಉಪಸ್ಥಿತರಿದ್ದರು.
ಜಪಾನ್ ಮಾದರಿ ಕಲಿಕೆ ಅಗತ್ಯ
ಜಪಾನ್‌ನಲ್ಲಿ ಮಕ್ಕಳ ಕಲಿಕಾ ಆರಂಭಿಕ ಹಂತದಲ್ಲಿ ನೈರ್ಮಲ್ಯ ಕುರಿತು ಮಾತ್ರ ಹೇಳಿಕೊಡಲಾಗುತ್ತಿದೆ. ಮಕ್ಕಳಿಗೆ ಓದು ಬರಹಕ್ಕಿಂತ ಸಂಸ್ಕಾರ ಸಂಸ್ಕೃತಿ ಇರಬೇಕಾಗುತ್ತದೆ. ಹೀಗಾಗಿಯೇ ಜಪಾನ್‌ನಲ್ಲಿ ಆರಂಭಿಕ ಹಂತದ ಮಕ್ಕಳಿಗೆ ಸುತ್ತಲಿನ ಪರಿಸರದಲ್ಲಿನ ಪ್ರಾಣಿ ಪಕ್ಷಿ ಗಿಡಗಳು ಗುರು ಹಿರಿಯರ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಮಾದರಿಯ ಕಲಿಕೆ ನಮ್ಮ ಅಂಗನವಾಡಿಗಳಲ್ಲೂ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.