ADVERTISEMENT

ಕನ್ನಡ ಶಾಲೆ | ಅಸಡ್ಡೆ ಬೇಡ: ಎಂ.ಬಿ.ವೆಂಕಟೇಶಪ್ಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:19 IST
Last Updated 4 ಜನವರಿ 2026, 6:19 IST
ಸೂಲಿಬೆಲೆಯ ತಂಗುದಾಣ ಬಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ
ಸೂಲಿಬೆಲೆಯ ತಂಗುದಾಣ ಬಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ   

ಸೂಲಿಬೆಲೆ(ಹೊಸಕೋಟೆ): ಇತ್ತೀಚೀನ ದಿನಗಳಲ್ಲಿ ಪೋಷಕರಲ್ಲಿ ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಮೂಡಿದ್ದು, ಆಂಗ್ಲ ವ್ಯಾಮೋಹ ಮತ್ತು ಖಾಸಗಿ ಶಾಲೆಗಳ ಬಗ್ಗೆ ಪ್ರೀತಿ ಹೆಚ್ಚಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆಂಕಟೇಶಪ್ಪ ಹೇಳಿದರು.

ಸೂಲಿಬೆಲೆಯ ತಂಗುದಾಣ ಬಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ನುರಿತ ಶಿಕ್ಷಕರಿದ್ದು ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ. ಸರ್ಕಾರದಿಂದ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಹಾಗೂ ಮೊಟ್ಟೆ ಬಾಳೇಹಣ್ಣು ನೀಡಲಾಗುತ್ತದೆ. ಜೊತೆಗೆ ಉಚಿತ ಪಠ್ಯಪುಸ್ತಕ ಮತ್ತು ವಿದ್ಯಾರ್ಥಿವೇತನ ಸಹ ನೀಡಲಾಗುತ್ತದೆ ಇದನ್ನು ಪೋಷಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿಯಾದ ಪದ್ಮನಾಭ ಮಾತನಾಡಿ, ರಾಜ್ಯದಲ್ಲಿ ಪ್ರತಿಭಾ ಕಾರಂಜಿಗೆ ತಾಲ್ಲೂಕಿನ ಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಆಗಿರುವುದರ ಹಿಂದೆ ನಮ್ಮ ಶಿಕ್ಷಕರ ಪಾತ್ರ ಇಲ್ಲವೆಂದಲ್ಲ. ಹಾಗಾಗಿ ಮಕ್ಕಳು ಸಾಧನೆ ಗೈದಿದ್ದಾರೆ ಎಂದರೆ ಅದರ ಹಿಂದೆ ಶಿಕ್ಷಕರ ಪಾತ್ರ ಅನನ್ಯವಾಗಿತ್ತೆಂದು ಎಂಬುದನ್ನು ಯಾರು ಸಹ ತಳ್ಳಿಹಾಕುವಂತಿಲ್ಲ ಎಂದರು.

ಶಾಲಾ ಅಧ್ಯಕ್ಷ ಎಸ್.ವೈ.ನಾಗರಾಜ್, ಗ್ರಾಮಪಂಚಾಯತಿ ಅಧ್ಯಕ್ಷ ಜನಾರ್ಧನರೆಡ್ಡಿ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ಸಿಆರ್.ಪಿ ಮಂಜುನಾಥ್, ನಿವೃತ್ತ ಶಿಕ್ಷಕ ಬಿ.ಶ್ರೀನಿವಾಸ್, ರಾಜಸ್ವ ನೀರಿಕ್ಷಕ ಜ್ಞಾನಮೂರ್ತಿ, ಮೊರಾಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ಮುಖ್ಯಶಿಕ್ಷಕಿ ಸೌಮ್ಯ, ಇತರರು ಇದ್ದರು.

ವಾರ್ಷಿಕೋತ್ಸವದಲ್ಲಿ ಮಕ್ಕಳ ನೃತ್ಯ 
ದೇಶದ ಭವಿಷ್ಯ ಶಿಕ್ಷಣದಲ್ಲಿ ಅಡಗಿದೆ ಆದರೆ ಇಂದು ಶಿಕ್ಷಣ ವ್ಯಾಪಾರೀಕರಣ ಆಗುತ್ತಿರುವುದು ವಿಷಾದನೀಯ ಸಂಗತಿ. ಇಂದಿನ ಸ್ಪರ್ಧಾತ್ಮಕ ಜಗತ್ತಿಗತ್ತಿನಲ್ಲಿ ನಮ್ಮ ಬದುಕು ಹಸನಾಗಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ
ನಾರಾಯಣಗೌಡ ಯುವ ಮುಖಂಡ
ಅರಿವಿನ ಬೆಳಕು ಕಾರ್ಯಕ್ರಮದಡಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಾಸಕ ಶರತ್ ಬಚ್ಚೇಗೌಡ ತಾಲ್ಲೂಕಿನ 10ನೇ ತರಗತಿಯ 3800 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ವಿತರಿಸಲಾಗುತ್ತಿದೆ
ಪದ್ಮನಾಭ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.