ADVERTISEMENT

ಬೆಳೆ ವಿಮಾ‌ ಯೋಜನೆಗೆ ಅರ್ಜಿ‌ ಆಹ್ವಾನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 13:18 IST
Last Updated 9 ಜುಲೈ 2024, 13:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೊಸಕೋಟೆ: 2024-25ನೇ ಸಾಲಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅಡಿಯಲ್ಲಿ ಹೊಸಕೋಟೆ ತಾಲ್ಲೂಕಿಗೆ ಮಾವು ಮತ್ತು ದ್ರಾಕ್ಷಿ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ರೈತ ಬಾಂಧವರು‌ ಸ್ವಇಚ್ಛೆಯಿಂದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕಾ ಇಲಾಖೆ ತಿಳಿಸಿದೆ.

ಪ್ರತಿ ಹೆಕ್ಟೇರ್ ಮಾವಿಗೆ ₹80 ಸಾವಿರ, ದ್ರಾಕ್ಷಿಗೆ ₹2.80 ಲಕ್ಷ ವಿಮಾ ಮೊತ್ತವಾಗಿದ್ದು, ಅದರಲ್ಲಿ ಶೇ 5ರಷ್ಟು ರೈತರು ವಂತಿಗೆ ಪಾವತಿಸಬೇಕಿದ್ದು, ಅದರಂತೆ ಮಾವಿಗೆ ₹5 ಸಾವಿರ, ದ್ರಾಕ್ಷಿಗೆ ₹ 14 ಸಾವಿರ ಪಾವತಿಸಬೇಕು.

ADVERTISEMENT

ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನ.  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 94834 78162, 82172 10320ಗೆ ಸಂಪರ್ಕಿಸುವಂತೆ ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.