ADVERTISEMENT

10ನೇ ವಾರ್ಷಿಕೋತ್ಸವ: ಪ್ರತಿಭಾ ಪುರಸ್ಕಾರಕ್ಕೆ ಶ್ಲಾಘನೆ -ಪಿಳ್ಳಮುನಿಶಾಮಪ್ಪ

ಅರುಂಧತಿ ಸೇವಾ ಸಂಸ್ಥೆಯ 10ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:37 IST
Last Updated 22 ಜುಲೈ 2022, 5:37 IST
ದೇವನಹಳ್ಳಿಯ ಅರುಂಧತಿ ಸೇವಾ ಸಂಸ್ಥೆಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು
ದೇವನಹಳ್ಳಿಯ ಅರುಂಧತಿ ಸೇವಾ ಸಂಸ್ಥೆಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು   

ದೇವನಹಳ್ಳಿ: ‘ಎಲ್ಲಾ ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರದೊಂದಿಗೆ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ನೆರವು ನೀಡುತ್ತಿರುವುದು ಶ್ಲಾಘನೀಯ’ ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಅರುಂಧತಿ ಸೇವಾ ಸಂಸ್ಥೆಯ 10ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಸಾಧಕರಿಗೆ ಉತ್ತಮ ವೇದಿಕೆ ಕಲ್ಪಿಸಿದೆ. ಅವರ ಸೇವಾ ಮನೋಭಾವ ಅನುಕರಣೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಪರೀಕ್ಷೆ ಎದುರಿಸಲು ಅನುಕೂಲ ಕಲ್ಪಿಸಬೇಕು ಎಂದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್‌ ಮಾತನಾಡಿ, ಕಳೆದ 10 ವರ್ಷಗಳಿಂದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಯಾವುದೇ ಜಾತಿ ಭೇದ ಇಲ್ಲದೆ ಸಮಾನವಾಗಿ ಗುರುತಿಸಿ ಅವರಿಗೆ ಸಮಾಜ ಸೇವಾ ಕಾರ್ಯಕ್ರಮ ಮಾಡುತ್ತಿರುವುದು ಈ ನೆಲದ ಭಾಗ್ಯ ಎಂದು ಅಭಿಪ್ರಾಯಪಟ್ಟರು.

‘ಮೀಸಲಾತಿ ಮೂಲಕ ಅನೇಕ ಸವಲತ್ತು ಪಡೆಯುತ್ತಿರುವ ಎಲ್ಲರೂ ಪ್ರತಿನಿತ್ಯ ಅಂಬೇಡ್ಕರ್‌ ಸಿದ್ಧಾಂತಗಳನ್ನು ಸ್ಮರಣೆ ಮಾಡಿಕೊಳ್ಳಬೇಕು. ಶಿಕ್ಷಣವೊಂದೇ ಎಲ್ಲಾ ತಾರತಮ್ಯ ಹೋಗಲಾಡಿಸಲು ಇರುವ ಅಸ್ತ್ರ’ ಎಂದು ಬಿಬಿಎಂಪಿ ಮಾಜಿ ಸದಸ್ಯ ಹೆಬ್ಬಾಳ ಆನಂದ್ ಕುಮಾರ್‌ ತಿಳಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಸಮಾಜ ಸೇವಕ ಶೆಟ್ಟಿಗೆರೆ ರಾಜಣ್ಣ, ಮಾದಿಗ ಪ್ರಚಾರ ಸಮಿತಿಯ ದಂಡೋರ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಜಾಲಿಗೆ ಗ್ರಾ.ಪಂ. ಅಧ್ಯಕ್ಷೆ ದೀಪ್ತಿ ವಿಜಯಕುಮಾರ್, ಟಿಎಪಿಸಿಎಂಎಸ್‌ ಸದಸ್ಯ ಗುರಪ್ಪ, ಆದಿಜಾಂಬವ ಟ್ರಸ್ಟ್ ಅಧ್ಯಕ್ಷ ಎಂ.ಎಂ. ಶ್ರೀನಿವಾಸ್, ಪುರಸಭಾ ಸದಸ್ಯರಾದ ಜಿ.ಎ. ರವೀಂದ್ರ, ಮುನಿಕೃಷ್ಣ, ವೇಣುಗೋಪಾಲ್‌,ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನಿಕಟಪೂರ್ವ ಅಧ್ಯಕ್ಷ ಎಸ್‌.ಎಂ. ಆನಂದ್‌ಕುಮಾರ್, ಪದಾಧಿಕಾರಿಗಳಾದ ಸಿ. ಮುನಿಕೃಷ್ಣಪ್ಪ, ಜಾಲಿಗೆ ಮುನಿರಾಜು, ಎಂ. ಹರ್ಷನಾಥ್, ಕೆ. ಮಂಜುನಾಥ್, ನರಸಿಂಹಮೂರ್ತಿ, ಡಿ.ಎನ್‌. ಅನಿಲ್, ಸಿ. ಶ್ರೀನಿವಾಸ್, ಎನ್‌. ನರಸಿಂಹಮೂರ್ತಿ, ಡಿ. ಮುನಿಕೃಷ್ಣ, ಡಿ.ಎಂ. ವೇಣುಗೋಪಾಲ್, ಮಾಳಿಗೇನಹಳ್ಳಿ ವೆಂಕಟೇಶ್‌ಮೂರ್ತಿ, ಎಂ. ಅಮರನಾರಾಯಣ್, ಎಂ. ವೆಂಕಟೇಶ್, ನಾಗೇಶ್, ಎನ್‌. ವೆಂಕಟಪ್ಪ, ಮುನಿರಾಜಪ್ಪ, ವಿ. ಮುನಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.