
ಸೂಲಿಬೆಲೆ (ಹೊಸಕೋಟೆ): ಮುತ್ಸಂದ್ರ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಅಸ್ಸಾಂನ ನಾಲ್ವರು ಕಾರ್ಮಿಕರು ತಾವಿದ್ದ ಮನೆಯಲ್ಲಿ ಶಂಕಾಸ್ಪದವಾಗಿ ಮೃತಪಟ್ಟಿದ್ದಾರೆ.
ಜಯಂತ್ ಶಿಂಧೆ (25), ನೀರೇಂದ್ರನಾಥ್ ಟೈಡ್ (24) ಡಾಕ್ಟರ್ ಟೈಡ್ (25), ಧನಂಜಯ್ ಟೈಡ್ (20) ಮೃತ ಕಾರ್ಮಿಕರು. ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಎರಡನೇ ಪಾಳಿ ಕೆಲಸಕ್ಕೆ ಹೋಗಿರಲಿಲ್ಲ. ಇವರ ಜೊತೆಗೆ ವಾಸವಿದ್ದ ಕಾರ್ಮಿಕ ಅಜಯ್ ಕೆಲಸಕ್ಕೆ ತೆರಳಿದ್ದ. ಆತ ಕೆಲಸವನ್ನು ಮುಗಿಸಿ ರಾತ್ರಿ ಮನೆಗೆ ಹಿಂದಿರುಗಿದಾಗ ನಾಲ್ವರು ಮೃತಪಟ್ಟಿರುವುದು ಗೊತ್ತಾಯಿತು. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.
ಗ್ಯಾಸ್ ಸ್ಟೌ ಮೇಲಿಟ್ಟಿದ್ದ ಪಾತ್ರೆಯಲ್ಲಿ ಅನ್ನ ಸೀದು ಹೋಗಿತ್ತು. ಕಿಟಕಿ ಇಲ್ಲದಿದ್ದ ಕೊಠಡಿಯಲ್ಲಿ ಹೊಗೆ ತುಂಬಿತ್ತು. ಉಸಿರುಗಟ್ಟಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.