ADVERTISEMENT

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸತ್ಕಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:55 IST
Last Updated 24 ಫೆಬ್ರುವರಿ 2026, 5:55 IST
ಆನೇಕಲ್ ತಾಲ್ಲೂಕಿನ ತಿರುಪಾಳ್ಯದ ನಾಗಿಣಿ ಅವರು ರಾಜ್ಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 48 ರ್‍ಯಾಂಕ್‌ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಗಣಿ ಪುರಸಭಾ ಸದಸ್ಯ ಪುನೀತ್  ಅಭಿನಂದಿಸಿದರು
ಆನೇಕಲ್ ತಾಲ್ಲೂಕಿನ ತಿರುಪಾಳ್ಯದ ನಾಗಿಣಿ ಅವರು ರಾಜ್ಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 48 ರ್‍ಯಾಂಕ್‌ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಗಣಿ ಪುರಸಭಾ ಸದಸ್ಯ ಪುನೀತ್  ಅಭಿನಂದಿಸಿದರು   

ಹೆಬ್ಬಗೋಡಿ (ಆನೇಕಲ್): ಹೆಬ್ಬಗೋಡಿ ಸಮೀಪದ ತಿರುಪಾಳ್ಯದ ಆಟೊ ಚಾಲಕರೊಬ್ಬರ ಮಗಳು ರಾಜ್ಯ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಯಲ್ಲಿ 48 ರ್‍ಯಾಂಕ್‌ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಗಣಿ ಪುರಸಭೆ ಸದಸ್ಯ ಪುನೀತ್‌ ಅಭಿನಂದಿಸಿದರು.

ತಿರುಪಾಳ್ಯದ ನಿವಾಸಿ ಆಟೊ ಚಾಲಕ ಲಕ್ಷ್ಮಣ್‌ ಮತ್ತು ಮಂಜುಳ ದಂಪತಿ ಪುತ್ರಿ ನಾಗಿಣಿ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಉನ್ನತ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಕಾನೂನು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಸಾಧನೆಗೆ ನಗರ-ಗ್ರಾಮೀಣ, ಬಡವ-ಶ್ರೀಮಂತ ಎಂಬ ಬೇಧಭಾವವಿಲ್ಲ. ಸಾಧನೆಯು ಸಾಧಕನ ಸ್ವತ್ತಾಗಿದೆ ಎಂದು ಪುನೀತ್‌ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT