ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಮಂಗಳವಾರ ಆಟೊ ಚಾಲಕನನ್ನು ಸೋಮವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಜಿಗಣಿ ಸಮೀಪದ ಹಿನ್ನಕ್ಕಿಯಲ್ಲಿ ವಾಸವಾಗಿದ್ದ ಮೈಸೂರು ಜಿಲ್ಲೆ ತಲಕಾಡು ಮೂಲದ ದರ್ಶನ್ (28) ಮೃತ ಆಟೊ ಚಾಲಕ. ದರ್ಶನ್ ತನ್ನ ಅಕ್ಕ, ಭಾವನೊಂದಿಗೆ ವಾಸವಾಗಿದ್ದ.
ಸೋಮವಾರ ರಾತ್ರಿ ಭಾವವನ್ನು ಕೆಲಸಕ್ಕೆ ಬಿಟ್ಟು ಬೊಮ್ಮಸಂದ್ರ ಬಳಿ ಬಂದಾಗ ತಂಡವೊಂದು ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಡಿಸಿಪಿ ಸಾರಾ ಫಾತೀಮಾ, ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಸತೀಶ್, ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಸೋಮಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಶ್ವಾನದಳ ಮತ್ತು ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.